ಗದಗ:ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ವಿರುದ್ಧ ಸಚಿವೆ ಶಶಿಕಲಾ ಜೊಲ್ಲೆ ನಗರದಲ್ಲಿ ಆಕ್ರೋಶ ವ್ಯಕ್ತಪಡಿಸಿ, ದೇಶದ್ರೋಹದ ಘೋಷಣೆ ಕೂಗುವವರನ್ನು ಪಾಕಿಸ್ತಾನಕ್ಕೆ ಕಳಿಸಬೇಕೆಂದು ಹೇಳಿದ್ದಾರೆ.
ದೇಶದ್ರೋಹದ ಘೋಷಣೆ ಕೂಗಿದವರನ್ನು ಪಾಕಿಸ್ತಾನಕ್ಕೆ ಕಳಿಸಬೇಕು: ಶಶಿಕಲಾ ಜೊಲ್ಲೆ - latest reaction on pak pro slogans
ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ವಿರುದ್ಧ ಸಚಿವೆ ಶಶಿಕಲಾ ಜೊಲ್ಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ದೇಶದ್ರೋಹದ ಘೋಷಣೆ ಕೂಗಿದವರನ್ನು ಪಾಕ್ತಿಸಾನಕ್ಕೆ ಕಳುಹಿಸಬೇಕು. ಅಲ್ಲಿ ಅವರಿಗೆ ಯಾವ ರೀತಿ ಟ್ರೀಟ್ಮೆಂಟ್ ಸಿಗುತ್ತೆ ಎನ್ನುವುದು ಗೊತ್ತಾಗಬೇಕೆಂದು ಕಿಡಿಕಾರಿದ್ದಾರೆ.
ಸಿಎಎ ವಿರೋಧಿಸಿ ಪ್ರತಿಭಟನೆ ಮಾಡೋದು ಅವರ ಹಕ್ಕು. ಆದ್ರೆ ಪ್ರತಿಭಟನೆ ವೇಳೆ 18ರಿಂದ 20 ವರ್ಷ ವಯಸ್ಸಿನ, ಅದೂ ಹಿಂದೂ ಯುವತಿಯರು ದೇಶದ್ರೋಹದ ಘೋಷಣೆ ಕೂಗೋದು ತಪ್ಪು. ಇಂತಹ ಘೋಷಣೆ ಕೂಗಿದ್ದಕ್ಕೆ ನಾನು ಹಾಗೂ ಇಡೀ ದೇಶದ ಜನರು ಅದನ್ನು ಖಂಡಿಸಿದ್ದೇವೆ ಎಂದರು. ಪೊಲೀಸರು ಸಹ ಅವಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ದೇಶದ್ರೋಹದ ಘೋಷಣೆ ಹಾಕುವುದರ ಹಿಂದೆ ಕಾಣದ ಕೈಗಳ ಕೈವಾಡವೂ ಇದೆ ಎಂದರು.
ಹಿಂದೂ ಯುವತಿಯರನ್ನು ಇಟ್ಕೊಂಡು ಕೆಲ ಸಂಘಟನೆಗಳು ಘೋಷಣೆ ಕೂಗಿಸುತ್ತಿವೆ ಎನ್ನುವ ಅನುಮಾನ ಮೂಡುತ್ತಿದೆ. ದೇಶದ್ರೋಹದ ಘೋಷಣೆ ಕೂಗಿದವರನ್ನು ಪಾಕ್ತಿಸಾನಕ್ಕೆ ಕಳುಹಿಸಬೇಕು. ಅಲ್ಲಿ ಅವರಿಗೆ ಯಾವ ರೀತಿ ಟ್ರೀಟ್ಮೆಂಟ್ ಸಿಗುತ್ತೆ ಎನ್ನುವುದು ಗೊತ್ತಾಗಬೇಕು. ಈ ದೇಶದ ನೀರು ಕುಡಿದು, ಅನ್ನ ತಿಂದು, ಇಲ್ಲೇ ಇದ್ಕೊಂಡು ಪಾಕ್ ಪರ ಘೋಷಣೆ ಕೂಗುವುದನ್ನು ನಾನು ಖಂಡಿಸುತ್ತೇನೆ ಎಂದು ಕಿಡಿಕಾರಿದ್ರು.