ಗದಗ: ಜಿಲ್ಲೆಯಲ್ಲಿ ಇಂದು ಮತ್ತೆ 13 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 315ಕ್ಕೆ ಏರಿದೆ.
ಹಾವೇರಿ ಜಿಲ್ಲಾ ಪ್ರವಾಸದ ಹಿನ್ನೆಲೆಯುಳ್ಳ ಶಿರಹಟ್ಟಿ ತಾಲೂಕಿನ ಶಿಗ್ಲಿ ಗ್ರಾಮದ ನಿವಾಸಿ 37 ವರ್ಷದ ಪುರುಷ ರೋಗಿ-36323 ಗೆ ಸೋಂಕು ದೃಢಪಟ್ಟಿದೆ. ಲಕ್ಷ್ಮೇಶ್ವರ ನಗರದ ದಾಸರ ಓಣಿ ನಿವಾಸಿ 24 ವರ್ಷದ ಮಹಿಳೆ ರೋಗಿ-28940 ಸೋಂಕಿತರ ಸಂಪರ್ಕದಿಂದಾಗಿ ಅದೇ ಪ್ರದೇಶದ ನಿವಾಸಿ 20 ವರ್ಷದ ಮಹಿಳೆ ರೋಗಿ-36447 ಸೋಂಕು ದೃಢಪಟ್ಟಿದೆ. ಬೆಳಗಾವಿ ಜಿಲ್ಲೆಯ ಸುರೇಬಾನ ಪ್ರವಾಸದ ಹಿನ್ನೆಲೆಯುಳ್ಳ ಗದಗ ತಾಲೂಕಿನ ಮುಳಗುಂದ ನಿವಾಸಿ 49 ವರ್ಷದ ಪುರುಷ ರೋಗಿ-36463 ಸೋಂಕು ದೃಢಪಟ್ಟಿರುತ್ತದೆ. ಬೆಂಗಳೂರ ಪ್ರವಾಸದ ಹಿನ್ನೆಲೆಯುಳ್ಳ ಗದಗ ತಾಲೂಕಿನ ಹರ್ತಿ ಗ್ರಾಮದ ನಿವಾಸಿಗಳಾದ 37 ವರ್ಷದ ಮಹಿಳೆ ರೋಗಿ- 36473 ಹಾಗೂ 38 ವರ್ಷದ ಪುರುಷ ರೋಗಿ- 36501 ಸೋಂಕು ದೃಢಪಟ್ಟಿರುತ್ತದೆ.
ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಗದಗ ಬೆಟಗೇರಿ ಹುಡ್ಕೋ ಕಾಲೋನಿಯ ನಿವಾಸಿ 47 ವರ್ಷದ ಪುರುಷ 36559 ಸೋಂಕು ದೃಢಪಟ್ಟಿದ್ದು, ಸೋಂಕು ಸಂಪರ್ಕದ ಮಾಹಿತಿ ಪತ್ತೆ ಹಚ್ಚಲಾಗುತ್ತಿದೆ. ಗದಗ ಬೆಟಗೇರಿ ನಗರದ ಬಸವೇಶ್ವರ ನಗರ ನಿವಾಸಿ 51 ವರ್ಷದ ಮಹಿಳೆ ರೋಗಿ-31106 ಸೋಂಕಿತರ ಸಂಪರ್ಕದಿಂದಾಗಿ ನಗರದ ಶಹಪೂರ ಪೇಟೆಯ ನಿವಾಸಿ 26 ವರ್ಷದ ಪುರುಷ 36570 ಸೋಂಕು ದೃಢಪಟ್ಟಿರುತ್ತದೆ. ಲಕ್ಷ್ಮೇಶ್ವರ ನಗರದ ದಾಸರ ಓಣಿ ನಿವಾಸಿ 24 ವರ್ಷದ ಮಹಿಳೆ ರೋಗಿ-28940 ಸೋಂಕಿತರ ಸಂಪರ್ಕದಿಂದಾಗಿ ಅದೇ ಪ್ರದೇಶದ ನಿವಾಸಿ 1 ವರ್ಷದ ಮಗು 36586 ಸೋಂಕು ದೃಢಪಟ್ಟಿರುತ್ತದೆ. ಲಕ್ಷ್ಮೇಶ್ವರದ ಇಂದಿರಾ ನಗರ ನಿವಾಸಿ 41 ವರ್ಷದ ಮಹಿಳೆ ರೋಗಿ-18285 ಸೋಂಕಿತರ ಸಂಪರ್ಕದಿಂದಾಗಿ ಗದಗ ತಾಲೂಕಿನ ನಾಗಾವಿಯ ಗಾಳೆಮ್ಮನ ಗುಡಿ ನಿವಾಸಿಗಳಾದ 32 ವರ್ಷದ ಪುರುಷ ರೋಗಿ 36616 ಹಾಗೂ 4 ವರ್ಷದ ಬಾಲಕ ರೋಗಿ- 36634 ಸೋಂಕು ದೃಢಪಟ್ಟಿರುತ್ತದೆ.
ನರಗುಂದದ ಹೊರಕೇರಿ ಓಣಿ ನಿವಾಸಿ 19 ವರ್ಷದ ಯುವಕ ರೋಗಿ-36666 ಗೆ ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿರುತ್ತದೆ. ಬೆಂಗಳೂರಿನ ಪ್ರವಾಸದ ಹಿನ್ನೆಲೆಯುಳ್ಳ ಶಿರಹಟ್ಟಿ ತಾಲೂಕಿನ ಗೊಜನೂರು ಗ್ರಾಮದ 33 ವರ್ಷದ ಪುರುಷ ರೋಗಿ-36686 ಸೋಂಕು ದೃಢಪಟ್ಟಿದೆ. ಗದಗ ಬೆಟಗೇರಿ ಕಾಗದಗಾರ ಓಣಿ ನಿವಾಸಿ 72 ವರ್ಷದ ಪುರುಷ ರೋಗಿ-36726 ಗೆ ತೀವ್ರ ಉಸಿರಾಟದ ತೊಂದರೆಯ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿರುತ್ತದೆ. ಇವರಿಗೆ ನಿಗದಿತ ಕೋವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.