ಕರ್ನಾಟಕ

karnataka

ETV Bharat / state

ಗದಗದಲ್ಲಿ ಕಳ್ಳರ ಕೈಚಳಕ: ಮದುವೆಗೆ ತಂದಿದ್ದ ಚಿನ್ನಾಭರಣ, ಜವಳಿ ಬಟ್ಟೆ ಕದ್ದೋಯ್ದ ಖದೀಮರು - ಗದಗದಲ್ಲಿ ಕಳ್ಳತನ

ನಗರದ ಹೊರವಲಯದ ಕೆಎಸ್​ಆರ್​ಟಿಸಿ ಕಾಲೋನಿಯಲ್ಲಿರುವ ಮನೆಯೊಂದರ ಬೀಗ ಮುರಿದು ಖದೀಮರು ತಮ್ಮ ಕೈಚಳಕ ತೋರಿಸಿದ್ದು, ಮದುವೆಗೆ ತಂದಿದ್ದ ಸುಮಾರು 30 ಗ್ರಾಂ ಚಿನ್ನಾಭರಣ ಹಾಗೂ 1ಲಕ್ಷ ಮೌಲ್ಯದ ಜವಳಿ ಬಟ್ಟೆಗಳನ್ನು ಕಳ್ಳತನ ಮಾಡಿದ್ದಾರೆ. ಈ ಸಂಬಂಧ ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gadaga

By

Published : Oct 5, 2019, 12:17 PM IST

ಗದಗ:ನಗರದಲ್ಲಿ ಕಳ್ಳರು ಕೈ ಚಳಕ ತೋರಿಸಿದ್ದು, ಮನೆಯ ಬೀಗ ಮುರಿದು ಮದುಗೆಗೆಂದು ತಂದಿದ್ದ ಚಿನ್ನಾಭರಣ ಮತ್ತು ಜವಳಿ ಬಟ್ಟೆಯನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.

ಮದುವೆಗೆ ತಂದಿದ್ದ ಚಿನ್ನಾಭರಣ, ಜವಳಿ ಬಟ್ಟೆ ಕದ್ದೋಯ್ದ ಖದೀಮರು

ನಗರದ ಹೊರವಲಯದ ಕೆಎಸ್​ಆರ್​ಟಿಸಿ ಕಾಲೋನಿಯಲ್ಲಿರುವ ಪ್ರೇಮಾ ಗುಡಿ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮದುವೆಗೆ ತಂದಿದ್ದ ಸುಮಾರು 30 ಗ್ರಾಂ ಚಿನ್ನಾಭರಣ ಹಾಗೂ 1ಲಕ್ಷ ಮೌಲ್ಯದ ಜವಳಿ ಬಟ್ಟೆಗಳನ್ನು ಕಳ್ಳತನ ಮಾಡಿದ್ದಾರೆ. ಈ ಸಂಬಂಧ ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.‌

ABOUT THE AUTHOR

...view details