ಕರ್ನಾಟಕ

karnataka

ETV Bharat / state

ವಿಶೇಷ ಸ್ಥಾನಮಾನ ರದ್ದತಿಗೆ ಬಿಜೆಪಿ, ಸಂಘ 1947ರಿಂದ್ಲೇ ಹೋರಾಡುತ್ತಿದೆ: ಗೋವಿಂದ ಕಾರಜೋಳ - ಗದಗ ಸುದ್ದಿ

ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವ ಬಗ್ಗೆ ಯಾವುದೇ ಭಿ‌ನ್ನಾಭಿಪ್ರಾಯಗಳಿಲ್ಲ. 1947 ರಿಂದಲೇ ಬಿಜೆಪಿ ಹಾಗೂ ಸಂಘ ಪರಿವಾರ ಈ ಕಾಯ್ದೆಯನ್ನು ರದ್ದು ಮಾಡುವಂತೆ ಹೋರಾಟ ಮಾಡುತ್ತಿತ್ತು. ಕೇಂದ್ರದ ನಿರ್ಧಾರವನ್ನು ಇಡೀ ದೇಶದ ಜನತೆ ಸ್ವಾಗತಿಸಿದ್ದಾರೆಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.

ಡಿಸಿಎಂ ಗೋವಿಂದ ಕಾರಜೋಳ

By

Published : Sep 20, 2019, 7:29 PM IST

ಗದಗ :ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ರದ್ದತಿ ಬಗ್ಗೆ ಕೇಂದ್ರ ಸರಕಾರ ತೆಗೆದುಕೊಂಡ ನಿರ್ಧಾರದ ಬಗ್ಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ದೇಶದ ಜನತೆ ಮೆಚ್ಚಿದ ನಿರ್ಧಾರ ಕಾಂಗ್ರೆಸ್​ನವರಿಗೆ ಏಕೆ ಹೊಟ್ಟೆ ಉರಿ ತಂದಿದೆ ಎಂಬುದು ಗೊತ್ತಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿರುವ ಡಿಸಿಎಂ ಗೋವಿಂದ ಕಾರಜೋಳ

ಗದಗನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 1947 ರಿಂದಲೇ ಬಿಜೆಪಿ ಹಾಗೂ ಸಂಘ ಪರಿವಾರ ಈ ಕಾಯ್ದೆ ರದ್ದು ಮಾಡುವಂತೆ ಹೋರಾಟ ಮಾಡುತ್ತಿತ್ತು ಎಂದರು.

ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರಕಾರದ ಪರಿಹಾರ ಕುರಿತು ಮಾತನಾಡಿದ ಅವರು, ಸರಕಾರದ ನಿಯಮಾವಳಿಗಳ ಪ್ರಕಾರ, ಪ್ರವಾಹ ಸಂತ್ರಸ್ತರಿಗೆ ಮೊದಲ ಹಂತದಲ್ಲಿ 3,800.ರೂ ಪರಿಹಾರ ಮಾತ್ರ ಕೊಡಬೇಕಿದೆ. ಆದ್ರೆ, ಮುಖ್ಯಮಂತ್ರಿಗಳು ಈಗಾಗಲೇ 10,000 ಸಾವಿರ ರೂಪಾಯಿ ಪರಿಹಾರ ನೀಡಿದ್ದಾರೆ. ಅಲ್ಲದೇ ಬೆಳೆಹಾನಿ‌ ಬಗ್ಗೆ ಸರ್ವೇ ಕಾರ್ಯ ನಡೆದಿದ್ದು ಎನ್​ಡಿಆರ್​ಎಫ್​ ನಿರ್ದೇಶನದಂತೆ ಪರಿಹಾರ ನೀಡಲಾಗುವುದೆಂದು ಸ್ಪಷ್ಟಪಡಿಸಿದ್ರು.

ಜೊತೆಗೆ ಕೊಚ್ಚಿ ಹೋಗಿರೋ ರಸ್ತೆ ಸೇತುವೆಗಳ ದುರಸ್ಥಿ ಕಾರ್ಯ ನಡೆಯುತ್ತಿದ್ದು, ಪುನರ್ ಸಂಪರ್ಕ ಕಲ್ಪಿಸುವ ಕಾರ್ಯಕ್ರಮ ಪ್ರಾರಂಭವಾಗಿವೆ. ಹೀಗಿದ್ದೂ ಪ್ರತಿಪಕ್ಷ ನಾಯಕರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕಾರಜೋಳ ಹೇಳಿದ್ರು.

ABOUT THE AUTHOR

...view details