ಗದಗ:ಇದುವರೆಗೆ ಜಿಲ್ಲೆಯಲ್ಲಿ 342 ಜನರ ಮೇಲೆ ನಿಗಾವಹಿಸಲಾಗಿದೆ ಅಂತ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ. ಇದರಲ್ಲಿ 28 ದಿನಗಳ ನಿಗಾ ಅವಧಿ ಪೂರೈಸಿದವರು 114 ಜನರಿದ್ರೆ, ಮನೆಯಲ್ಲಿಯೇ ಪ್ರತ್ಯೇಕ ನಿಗಾಹದಲ್ಲಿರುವವರು 181 ಜನರಿದ್ದಾರೆ.
342 ಜನರ ಮೇಲೆ ನಿಗಾ, ಸದ್ಯಕ್ಕೆ ಗದಗದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಇಲ್ಲ: ಡಿಸಿ - ಜಿಲ್ಲಾಧಿಕಾರಿ ಹಿರೇಮಠ
ಇಂದು ಗದಗದಲ್ಲಿ ಒಂದೂ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾಹಿತಿ ನೀಡಿದ್ದಾರೆ.
342 ಜನರ ಮೇಲೆ ನಿಗಾ: ಗದಗ್ನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಇಲ್ಲ-ಡಿಸಿ
ಇನ್ನು ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿರುವವರು 46 ಜನರಿದ್ದಾರೆ. ಇಂದಿನ 13 ಜನ ಸೇರಿ 188 ಜನರ ಮಾದರಿಗಳನ್ನ ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ 144 ಜನರ ವರದಿಗಳು ನೆಗೆಟಿವ್ ಅಂತ ಬಂದಿವೆ. ಇನ್ನೂ 43 ವರದಿಗಳು ಬಾಕಿ ಇವೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಜಿಲ್ಲೆಯಲ್ಲಿ ಪಿ.166 ಪ್ರಕರಣ ಕೊರೊನಾ ಪಾಸಿಟಿವ್ ಎಂದು ಧೃಡಪಟ್ಟಿತ್ತು ಎಂದು ತಿಳಿಸಿದ್ದಾರೆ.