ಕರ್ನಾಟಕ

karnataka

ETV Bharat / state

ಗದಗ ಜಿಲ್ಲೆಯಲ್ಲಿ ಬೆಡ್ - ಆಕ್ಸಿಜನ್ ಕೊರತೆ ಇಲ್ಲ: ಸಚಿವ ಸಿಸಿ ಪಾಟೀಲ್​ - ಸಿಎಂ ನೇತೃತ್ವದ ವಿಡಿಯೋ ಕಾನ್ಫರೆನ್ಸ್

ಪಾಸಿಟಿವ್ ಬಂದ ಎಲ್ಲರಿಗೂ ರೆಮ್ಡಿಸಿವಿರ್ ಇಂಜೆಕ್ಷನ್ ಕೊಡೋದಿಲ್ಲ. ಅವಶ್ಯಕತೆ ಇದ್ದವರಿಗೆ ಮಾತ್ರ ರೆಮ್ಡಿಸಿವಿರ್ ಕೊಡಬೇಕು ಎಂದು ಸಚಿವ ಸಿಸಿ‌ ಪಾಟೀಲ್ ಜಿಲ್ಲಾ ವೈದ್ಯರಿಗೆ ಸೂಚನೆ ನೀಡಿದರು.

There is no bed and oxygen shortage in Gadag district:  CC Patil
ಸಚಿವ ಸಿಸಿ‌ ಪಾಟೀಲ್

By

Published : Apr 29, 2021, 6:49 PM IST

ಗದಗ: 18 ವರ್ಷ ಮೇಲ್ಪಟ್ಟವರಿಗೆ ಮೇ 1 ರಿಂದ ಉಚಿತ ಲಸಿಕೆ ಪ್ರಾರಂಭ ಆಗುವುದು ಅನುಮಾನ. ಒಂದು ವಾರ ಮುಂದೂಡುವ ಸಾಧ್ಯತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ಕೈಗಾರಿಕಾ ಹಾಗೂ ವಾರ್ತಾ ಇಲಾಖೆ ಸಚಿವ ಸಿಸಿ‌ ಪಾಟೀಲ್ ಹೇಳಿದರು.

ನಗರದ ಜಿಲ್ಲಾ ಆಡಳಿತ ಭವನದಲ್ಲಿ ಸಿಎಂ ನೇತೃತ್ವದಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ಹಾಗೂ ಅಧಿಕಾರಿಗಳ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯಾದ್ಯಂತ 18 ವರ್ಷ ಮೆಲ್ಪಟ್ಟವರಿಗೆ ಉಚಿತ ಲಸಿಕೆ ನೀಡುವುದು ತಡವಾಗಲಿದೆ. 1 ಮತ್ತು 2 ನೇ ಹಂತದ ಲಸಿಕೆ ಮೊದಲು ಮುಗಿಯಬೇಕಿದೆ. ಅಷ್ಟರಲ್ಲಿ ಇನ್ನಷ್ಟು ಡೋಸ್ ಸಂಗ್ರಹಿಸಿ ಮುಂದಿನ ದಿನಾಂಕ ನಿಗದಿಯಾದ ನಂತರ ಲಸಿಕೆ ನೀಡಲಾಗುತ್ತದೆ ಎಂದು ಹೇಳಿದರು.

ರೆಮ್ಡೆಸಿವಿರ್ ಇಂಜೆಕ್ಷನ್ ಕುರಿತು ಪ್ರತಿಕ್ರಿಯಿಸಿದ ಅವರು, ಪಾಸಿಟಿವ್ ಬಂದ ಎಲ್ಲರಿಗೂ ಈ ಇಂಜೆಕ್ಷನ್ ಕೊಡೋದಿಲ್ಲ. ಅವಶ್ಯಕತೆ ಇದ್ದವರಿಗೆ ಮಾತ್ರ ರೆಮ್ಡೆಸಿವಿರ್ ಕೊಡಬೇಕು ಎಂದು ಜಿಲ್ಲಾ ವೈದ್ಯರಿಗೆ ಸೂಚನೆ ನೀಡಿದರು.

ಸಚಿವ ಸಿಸಿ‌ ಪಾಟೀಲ್

ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ರೆಮ್ಡೆಸಿವಿರ್ ಕೊರತೆ ಇಲ್ಲ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಕೊರತೆ ಇದೆ ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ 650 ಕೋವಿಡ್ ಸೋಂಕಿತರಿದ್ದಾರೆ. 182 ಜನ ಜಿಮ್ಸ್ ಸೇರಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 72 ಜನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

467 ಜನ ಹೋಮ್ ಐಸೋಲೇಶನ್​ನಲ್ಲಿ‌ದ್ದಾರೆ. ಜಿಲ್ಲೆಯಲ್ಲಿ ಯಾವುದೇ ಬೆಡ್ ಹಾಗೂ ಆಕ್ಸಿಜನ್ ಕೊರತೆ ಇಲ್ಲ. ಕೋವಿಡ್ ಕೇರ್ ಕೇಂದ್ರದಲ್ಲಿ 700 ಹಾಸಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆಯ ಎಲ್ಲ ಸರ್ಕಾರಿ ‌ಆಸ್ಪತ್ರೆಗಳಲ್ಲಿ 500 ಹಾಸಿಗೆ ವ್ಯವಸ್ಥೆ ಇದ್ದು, ಇನ್ನೂ 200 ಹೆಚ್ಚುವರಿ ಹಾಸಿಗೆ ವ್ಯವಸ್ಥೆಗೆ ಸಿದ್ದತೆ ಮಾಡಲಾಗುತ್ತದೆ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ 150 ಹಾಸಿಗೆ ವ್ಯವಸ್ಥೆ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದರು.

ABOUT THE AUTHOR

...view details