ಗದಗ :ಬಾಗಲಕೋಟೆ ಜಿಲ್ಲೆ ಬಾದಾಮಿ ಡಾಣಕಶಿರೂರನ ರೋಗಿ 607 ಗರ್ಭಿಣಿಗೆ ಸೋಂಕು ತಗುಲಿದ ಹಿನ್ನೆಲೆ ತವರು ಮನೆಯ ಊರಾದ ಕೃಷ್ಣಾಪುರ ಸೇರಿ ಹಲವು ಗ್ರಾಮಗಳಲ್ಲಿ ಆತಂಕದ ವಾತವರಣ ನಿರ್ಮಾಣವಾಗಿದೆ.
ರೋಗಿ 607 ಗರ್ಭಿಣಿಗೆ ಸೋಂಕು.. ಇಡೀ ಗ್ರಾಮವನ್ನೇ ದಿಗ್ಬಂಧನ ಮಾಡಿದ ಗ್ರಾಮಸ್ಥರು.. - Gadag blocked the entire village
ಹುನಗುಂಡಿ ಗ್ರಾಮದಿಂದ ಬಸರಕೋಡ ರಸ್ತೆ, ನೈನಾಪುರ ರಸ್ತೆ ಮಾಡಲಗೇರಿ ರಸ್ತೆ ಬಂದ್ ಮಾಡಲಾಗಿದ್ದು, ಇದರ ಜೊತೆಗೆ ಹುನಗುಂಡಿಯಿಂದ ಹೊಳೆ ಆಲೂರಿಗೆ ಹೋಗೋದಕ್ಕೆ ಜನರಿಗೆ ಹಾಗೂ ಆ್ಯಂಬುಲೆನ್ಸ್ ಹೋಗೋದು ಬರುವುದಕ್ಕೆ ರಸ್ತೆ ಪಕ್ಕದಲ್ಲಿ ಗೇಟ್ ಮಾಡಿದ್ದಾರೆ.

ಕೃಷ್ಣಾಪುರ ಗ್ರಾಮಸ್ಥರು
ಈ ಹಿನ್ನೆಲೆ ಕೃಷ್ಣಾಪುರ ಗ್ರಾಮದ ಪಕ್ಕದ ಗ್ರಾಮವಾದ ಹನಗುಂಡಿ ಗ್ರಾಮದಲ್ಲಿ ಜನರು ಸ್ವಯಂ ನಿರ್ಬಂಧ ಹಾಕಿಕೊಂಡು ಊರಿಗೆ ಯಾರು ಬರದಂತೆ ರಸ್ತೆ ಅಗೆದು ಇಡೀ ಗ್ರಾಮವನ್ನು ಲಾಕಡೌನ್ ಮಾಡಿಕೊಂಡಿದ್ದಾರೆ. ಹುನಗುಂಡಿ ಗ್ರಾಮದಿಂದ ಬಸರಕೋಡ ರಸ್ತೆ, ನೈನಾಪುರ ರಸ್ತೆ ಮಾಡಲಗೇರಿ ರಸ್ತೆ ಬಂದ್ ಮಾಡಲಾಗಿದ್ದು, ಇದರ ಜೊತೆಗೆ ಹುನಗುಂಡಿಯಿಂದ ಹೊಳೆ ಆಲೂರಿಗೆ ಹೋಗೋದಕ್ಕೆ ಜನರಿಗೆ ಹಾಗೂ ಆ್ಯಂಬುಲೆನ್ಸ್ ಹೋಗೋದು ಬರುವುದಕ್ಕೆ ರಸ್ತೆ ಪಕ್ಕದಲ್ಲಿ ಗೇಟ್ ಮಾಡಿದ್ದಾರೆ.
ಯಾರೂ ಬರದಂತೆ ರೋಡು ಅಗೆದು ಇಡೀ ಗ್ರಾಮವನ್ನು ಲಾಕ್ಡೌನ್ ಮಾಡಿದ ಕೃಷ್ಣಾಪುರ ಗ್ರಾಮಸ್ಥರು..
ಯಾವುದೇ ಗ್ರಾಮದ ಜನರು ಹುನಗುಂಡಿ ಒಳಗೆ ಬಾರದಂತೆ ನೋಡಿಕೊಳ್ಳುವುದಕ್ಕೆ ಗ್ರಾಮದ ಜನರು ನಿರ್ಬಂಧನೆ ಮಾಡಿದ್ದಾರೆ.