ಗದಗ:ಲಾಕ್ಡೌನ್ ಹಿನ್ನೆಲೆ ಗದಗನಲ್ಲಿ ಸಿಲುಕಿದ್ದ ಸುಮಾರು 100ಕ್ಕೂ ಅಧಿಕ ಕೂಲಿ ಕಾರ್ಮಿಕರಿಗೆ ಸಹಾಯ ಹಸ್ತ ನೀಡಿ ಅವರನ್ನು ಅವರ ರಾಜ್ಯಕ್ಕೆ ತಲುಪಿಸಿದ ಸಚಿವ ಸಿ.ಸಿ. ಪಾಟೀಲ್ ಅವರ ಕಾರ್ಯಕ್ಕೆ ತ್ರಿಪುರಾ ರಾಜ್ಯದ ಬುಡಕಟ್ಟು ಜನಾಂಗ ಕಲ್ಯಾಣ ಇಲಾಖೆ ಸಚಿವ ಮೇವರ್ ಕುಮಾರ್ ಜಮೇತಿಯಾ ಅವರು ಪತ್ರ ಬರೆದು ಅಭಿನಂದನೆ ಸಲ್ಲಿಸಿದ್ದಾರೆ.
ಸಿಸಿ ಪಾಟೀಲ್ ಸಹಾಯ ಹಸ್ತಕ್ಕೆ ಕಂಗ್ರಾಟ್ಸ್ ಹೇಳಿದ ತ್ರಿಪುರಾ ಮಂತ್ರಿ - CC Patil work
100ಕ್ಕೂ ಅಧಿಕ ಕೂಲಿ ಕಾರ್ಮಿಕರಿಗೆ ಸಹಾಯ ಹಸ್ತ ನೀಡಿ ಅವರನ್ನು ತಮ್ಮ ರಾಜ್ಯಕ್ಕೆ ತಲುಪಿಸಿದ ಸಚಿವ ಸಿ.ಸಿ. ಪಾಟೀಲ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ತ್ರಿಪುರಾದ ಸಚಿವರೊಬ್ಬರು ಪತ್ರ ಬರೆದಿದ್ದಾರೆ.
ಸಚಿವ ಸಿ.ಸಿ. ಪಾಟೀಲ್
ನಮ್ಮ ರಾಜ್ಯದ ಬಹಳಷ್ಟು ಕಾರ್ಮಿಕರು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಿಲುಕಿ ಕೊಂಡಿದ್ದರು. ಅವರಿಗೆ ತಾವು ಸಮಯಕ್ಕೆ ಸರಿಯಾಗಿ ಸಹಾಯ ಮಾಡಿ ಅವರನ್ನು ತಮ್ಮ ಊರಿಗೆ ತಲುಪಿಸುವಂತ ವ್ಯವಸ್ಥೆ ಮಾಡಿದ್ದಕ್ಕೆ ತಮಗೆ ತುಂಬಾ ಧನ್ಯವಾದಗಳು. ತಮ್ಮ ಈ ಮಹತ್ ಕಾರ್ಯವನ್ನು ನಮ್ಮ ಸರ್ಕಾರ ಮತ್ತು ನಮ್ಮ ಜನ ಯಾವತ್ತೂ ಮರೆಯುವುದಿಲ್ಲ. ಲಾಕ್ಡೌನ್ ಸಮಯದಲ್ಲಿ ಒಬ್ಬರಿಗೊಬ್ಬರು ಪರಸ್ಪರ ಸಹಾಯ ಸಹಕಾರ ಮಾಡೋಣ, ನಿಮಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.