ಗದಗ:ಕೊರೊನಾ ಶಂಕೆ ಹಿನ್ನಲೆ ಜಿಲ್ಲೆಯಲ್ಲಿ ಹೊಸದಾಗಿ 7 ಮಂದಿಯ ಮೇಲೆ ನಿಗಾ ವಹಿಸಲಾಗಿದ್ದು, ನಿಗಾದಲ್ಲಿರುವವರ ಸಂಖ್ಯೆ 458ಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಪ್ರಕಟಿಸಿದ್ದಾರೆ.
ಕೊರೊನಾ ಶಂಕೆ: ಗದಗದಲ್ಲಿ 458 ಮಂದಿ ಮೇಲೆ ನಿಗಾ
ಗದಗ ಜಿಲ್ಲೆಯಲ್ಲಿ ನಿಗಾದಲ್ಲಿರುವವರ ಸಂಖ್ಯೆ 458ಕ್ಕೆ ಏರಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ತಿಳಿಸಿದ್ದಾರೆ.
ಇದುವರೆಗೆ ಗದಗ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ 458
458 ಮಂದಿಯಲ್ಲಿ ಈಗಾಗಲೇ 28 ದಿನಗಳ ನಿಗಾ ಅವಧಿ ಪೂರೈಸಿದವರು 144 ಜನರಿದ್ದಾರೆ. ಜೊತೆಗೆ ಮನೆಯಲ್ಲಿಯೇ ಪ್ರತ್ಯೇಕ ನಿಗಾಹದಲ್ಲಿರುವವರು 306 ಜನರಿದ್ದಾರೆ ಇದರಲ್ಲೂ ಇಂದು ಹೊಸದಾಗಿ 8 ಮಂದಿ ಸೇರಿದ್ದಾರೆ. ಇನ್ನು ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿರುವವರು 7 ಜನರಿದ್ದಾರೆ ಎಂದು ಅವರು ತಿಳಿಸಿದರು.
ಸದ್ಯ ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 305 ಮಾದರಿಗಳಲ್ಲಿ 202 ಮಾದರಿಗಳು ನೆಗೇಟಿವ್ ಬಂದಿದ್ದು, ಇನ್ನು 102 ವರದಿಗಳು ಬರಲು ಬಾಕಿ ಇವೆ ಎಂದು ಅವರು ಮಾಹಿತಿ ನೀಡಿದ್ದಾರೆ.