ಗದಗ:ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಆರೋಪ ಪ್ರಕರಣ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ಲ ಗ್ರಾಮದಲ್ಲಿ ನಡೆದಿದೆ. ಗ್ರಾಮ ಪಂಚಾಯತ್ ಸ್ಟೋರ್ ರೂಮ್ವೊಂದರಲ್ಲಿ ಬೇಕಾಬಿಟ್ಟಿಯಾಗಿ ರಾಷ್ಟ್ರಧ್ವಜವನ್ನು ಎಸೆದಿದ್ದಾರೆ ಎನ್ನಲಾಗ್ತಿದೆ.
ಯಾವಗಲ್ಲ ಗ್ರಾ.ಪಂ. ಸಿಬ್ಬಂದಿ ವಿರುದ್ಧ ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ - gadag latest news
ಯಾವಗಲ್ಲ ಗ್ರಾಮ ಪಂಚಾಯತ್ ಸ್ಟೋರ್ ರೂಮ್ವೊಂದರಲ್ಲಿ ಬೇಕಾಬಿಟ್ಟಿಯಾಗಿ ರಾಷ್ಟ್ರಧ್ವಜವನ್ನು ಎಸೆಯಲಾಗಿದೆ.
ಯಾವಗಲ್ಲ ಗ್ರಾಮ ಪಂಚಾಯತ್ ಪಿಡಿಓ ಮತ್ತು ಅಲ್ಲಿನ ಸಿಬ್ಬಂದಿಯ ಬೇಜವಾಬ್ದಾರಿತನಕ್ಕೆ ಪ್ರತ್ಯಕ್ಷ ಉದಾಹರಣೆ ಆಗಿದೆ. ಹಾಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಬಗ್ಗೆ ಯಾವಗಲ್ಲ ಗ್ರಾಪಂ ಪಿಡಿಓ ದೇವರಡ್ಡಿ ಹಂಚಿನಾಳ ಅವರನ್ನು ಕೇಳಿದರೆ, ಇದು ನಾನಿಲ್ಲದ ವೇಳೆ ಯಾರೋ ಬೇಕಂತಲೆ ಈ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ ಯಾರಿಗೋ ಸಿಗುವಂತೆ ರಾಷ್ಟ್ರಧ್ವಜವನ್ನ ಹೊರಗಡೆ ಇಟ್ಟಿದ್ದೇಕೆ ಅಂತಾ ಪ್ರಶ್ನಿಸಿದಾಗ ಪಿಡಿಓ ದೇವರಡ್ಡಿ ಬಳಿ ಉತ್ತರವಿಲ್ಲದೆ ತಬ್ಬಿಬ್ಬಾದರು. ಇವರ ಬೇಜವಾಬ್ದಾರಿತನದಿಂದಲೇ ಈ ರೀತಿಯ ಘಟನೆ ನಡೆದಿದೆ. ಹಾಗಾಗಿ ಜಿಲ್ಲಾ ಪಂಚಾಯತ್ ಸಿಇಓ ಅವರು ಗಮನ ಹರಿಸಿ ಪಿಡಿಓ ವಿರುದ್ಧ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.