ಗದಗ:ಮನೆಯ ಮೇಲ್ಚಾವಣಿ ಕುಸಿದು ವ್ಯಕ್ತಿ ಮೃತಪಟ್ಟಿರೋ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ನಡೆದಿದೆ.
ಮನೆಯ ಮೇಲ್ಛಾವಣಿ ಕುಸಿದು ಮಲಗಿದ್ದಲ್ಲೇ ವ್ಯಕ್ತಿ ಸಾವು - house collapses
ಕಪ್ಪತ್ತಗುಡ್ಡದ ಜಾತ್ರೆ ನಿಮಿತ್ತ ಡಂಬಳದಲ್ಲಿರುವ ಮಾವನ ಮನೆಗೆ ಬಂದಿದ್ದಾಗ ಮನೆಯ ಮೇಲ್ಛಾವಣಿ ಕುಸಿದು ವ್ಯಕ್ತಿ ಸಾವನ್ನಪ್ಪಿದ್ದಾರೆ.
ವ್ಯಕ್ತಿ ಸಾವು
ತಿಪ್ಪಣ್ಣ ಉಮ್ಮಣ್ಣವರ (50) ಮೃತ ದುರ್ದೈವಿಯಾಗಿದ್ದು, ಹುಬ್ಬಳ್ಳಿಯ ಬೆಂಗೇರಿ ನಿವಾಸಿ ಎಂದು ತಿಳಿದು ಬಂದಿದೆ. ಕಪ್ಪತ್ತಗುಡ್ಡದ ಜಾತ್ರೆ ನಿಮಿತ್ತ ಡಂಬಳದಲ್ಲಿರುವ ಮಾವನ ಮನೆಗೆ ಬಂದಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅಲ್ಲೇ ಮಲಗಿದ್ದ ಕುಟುಂಬದ ಇತರೇ ಸದಸ್ಯರು, ಬೆಳಗಿನ ಜಾವ ಭಜನಾ ಮೇಳವನ್ನು ವೀಕ್ಷಿಸಿಲು ಹೊರಗಡೆ ಬಂದಿದ್ದಾರೆ. ಆದ್ರೆ ತಿಪ್ಪಣ್ಣ ಮಾತ್ರ ಅಲ್ಲಿಯೇ ಮಲಗಿದ್ದ. ಈ ವೇಳೆ ಸತತ ಮಳೆಯಿಂದ ನೆನೆದಿದ್ದ ಮಣ್ಣಿನ ಮನೆಯ ಮೇಲ್ಚಾವಣಿ ಕುಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.