ಗದಗ: ತೀವ್ರ ಕುತೂಹಲ ಕೆರಳಿಸಿದ್ದ ಗದಗ ಜಿಲ್ಲೆಯ ಎರಡು ಪುರಸಭೆಗಳ ಚುನಾವಣಾ ಪಲಿತಾಂಶ ಪ್ರಕಟವಾಗಿದೆ.
ಗದಗ ಜಿಲ್ಲೆಯಲ್ಲಿ ಕಮಲಮಯವಾದ ಸ್ಥಳೀಯ ಸಂಸ್ಥೆಗಳು: ಎರಡೂ ಪುರಸಭೆಗಳು ಬಿಜೆಪಿ ವಶಕ್ಕೆ - undefined
ಗದಗ ಜಿಲ್ಲೆಯ ಎರಡು ಪುರಸಭೆಗಳ ಚುನಾವಣಾ ಪಲಿತಾಂಶ ಪ್ರಕಟವಾಗಿದ್ದು, ಎರಡೂ ಪುರಸಭೆಗಳನ್ನ ಬಿಜೆಪಿ ತನ್ನ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಎರಡೂ ಪುರಸಭೆಗಳನ್ನ ಬಿಜೆಪಿ ತನ್ನ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನರಗುಂದ ಹಾಗೂ ಮುಂಡರಗಿ ಪುರಸಭೆಗಳನ್ನು ಬಿಜೆಪಿ ತನ್ನ ಕೈವಶ ಮಾಡಿಕೊಳ್ಳೋ ಮೂಲಕ ಬಿಜೆಪಿ ಜಿಲ್ಲೆಯಲ್ಲಿ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಅದ್ರಲ್ಲೂ ಮಾಜಿ ಸಚಿವರಾದ ಕಾಂಗ್ರೆಸ್ನ ಬಿ.ಆರ್.ಯಾವಗಲ್ ಹಾಗೂ ಬಿಜೆಪಿಯ ಸಿ.ಸಿ.ಪಾಟೀಲ್ ಅವರು ಪ್ರತಿನಿಧಿಸುವ ನರಗುಂದ ಪುರಸಭೆ ಬಿಜೆಪಿ ವಶವಾಗಿದೆ. ಒಟ್ಟು 23 ಸ್ಥಾನಗಳಲ್ಲಿ ಬಿಜೆಪಿ 17 ಸ್ಥಾನಗಳನ್ನು ಗೆದ್ದು ಬೀಗಿದರೆ, ಉಳಿದ 6 ಸ್ಥಾನಗಳು ಕಾಂಗ್ರೆಸ್ ಪಡೆದುಕೊಂಡು ಸಮಾಧಾನ ಪಟ್ಟುಕೊಂಡಿದೆ.
ಇನ್ನು 1973 ರಿಂದ ಕಾಂಗ್ರೆಸ್ ವಶದಲ್ಲಿದ್ದ ಮುಂಡರಗಿ ಪುರಸಭೆ ಮೊದಲ ಬಾರಿಗೆ ಬಿಜೆಪಿ ಪಾಲಾಗಿದೆ. ಒಟ್ಟು 23 ಸ್ಥಾನಗಳಲ್ಲಿ ಬಿಜೆಪಿ 12, ಕಾಂಗ್ರೆಸ್ 06, ಜೆಡಿಎಸ್ 01 ಹಾಗೂ 04 ಜನ ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. 12 ಸ್ಥಾನಗಳನ್ನು ಪಡೆದಿರೋ ಬಿಜೆಪಿ ಮೊದಲ ಬಾರಿ ಮುಂಡರಗಿ ಪುರಸಭೆಯ ಅಧಿಕಾರದ ಗದ್ದುಗೆ ಏರಲಿದೆ.