ಕರ್ನಾಟಕ

karnataka

ETV Bharat / state

ಊರಿಗೆ ಪ್ರವಾಹ ನುಗ್ಗಿದರೂ ಮನೆ ಬಿಟ್ಟ ಬರಲೊಪ್ಪದ ವೃದ್ಧೆ: ಮುಂದೇನಾಯ್ತು ಗೊತ್ತಾ? - Gadag

ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ 95 ವರ್ಷದ ಮುದ್ದಕಮ್ಮ ಎಂಬ ವೈದ್ಧೆ ಮನೆ ಬಿಟ್ಟು ಬರಲು ಹಿಂದೇಟು ಹಾಕುತ್ತಿದ್ದರು. ಆದರೆ ಆರ್ ಎಸ್ ಎಸ್ ತಂಡದವರು ವೃದ್ಧೆಯ ಮನವೊಲಿಸಿ ರಕ್ಷಣೆ ಮಾಡಿದ್ದಾರೆ.

ಭಾರಿ ಪ್ರಮಾಣದ ನೀರು

By

Published : Aug 8, 2019, 6:10 PM IST

Updated : Aug 8, 2019, 10:00 PM IST

ಗದಗ : ನವಿಲುತೀರ್ಥ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೊಣ್ಣೂರು ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಗ್ರಾಮದಲ್ಲಿ ಸಿಲುಕಿಕೊಂಡಿದ್ದ ವೃದ್ಧೆವೋರ್ವರು ತನ್ನ ಮನೆಯನ್ನು ಬಿಟ್ಟು ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ 95 ವರ್ಷದ ಮುದ್ದಕಮ್ಮ ಎಂಬ ವೈದ್ಧೆ ಮನೆ ಬಿಟ್ಟು ಬರಲು ಹಿಂದೇಟು ಹಾಕುತ್ತಿದ್ದರು. ಆದ್ರೆ ಆರ್ ಎಸ್ ಎಸ್ ತಂಡದವರು ವೃದ್ಧೆಯ ಮನವೊಲಿಸಿ ಅವರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಊರಿಗೆ ಪ್ರವಾಹ ನುಗ್ಗಿದರೂ ಮನೆ ಬಿಟ್ಟ ಬರಲೊಪ್ಪದ ವೃದ್ಧೆ

ಮಲಪ್ರಭಾ ನದಿ ನೀರಿನ ಹೊರಹರಿವು 1,10,000 ಕ್ಯೂಸೆಕ್​ಗೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಅಲ್ಲಿನ ಕೊಣ್ಣೂರು, ಬೂದಿಹಾಳ, ಲಕಮಾಪೂರ, ವಾಸನ ಗ್ರಾಮಗಳ ಜನರನ್ನು ನರಗುಂದದ ಬಸವೇಶ್ವರ ಕಾಲೇಜಿಗೆ ಸ್ಥಳಾಂತರಗೊಳಿಸಲಾಗುತ್ತಿದೆ. ಜನರನ್ನು ಪ್ರವಾಹದಿಂದ ರಕ್ಷಿಸಲು ಜಿಲ್ಲಾಡಳಿತ ಕೆಟ್ಟ ಬೋಟ್ ನೀರಿಗಿಳಿಸಿದ ಹಿನ್ನೆಲೆ ಜನರೇ ಜೆಸಿಬಿ ಮೂಲಕ ಬೋಟ್ ದಬ್ಬುವ ಪರಿಸ್ಥತಿ ಕಂಡು ಬಂತು. ಹೀಗಾಗಿ ಜಿಲ್ಲಾಡಳಿತದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Last Updated : Aug 8, 2019, 10:00 PM IST

ABOUT THE AUTHOR

...view details