ಕರ್ನಾಟಕ

karnataka

ETV Bharat / state

ಗದಗ: ನಿವೃತ್ತ ಯೋಧನನ್ನು ಅವಿರೋಧವಾಗಿ ಆಯ್ಕೆ ಮಾಡಿ ಗೌರವ ಸಲ್ಲಿಸಿದ ಗ್ರಾಮಸ್ಥರು!

ನಿವೃತ್ತ ಯೋಧ ವೆಂಕಟೇಶ ಗೆಜ್ಜಿ 30 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಾಯಕ್ ಸುಬೇದಾರ್ ಆಗಿ ಕಳೆದ ವರ್ಷ ನಿವೃತ್ತಿಯಾಗಿದ್ದಾರೆ. ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆ ಸ್ಪರ್ಧೆಗೆ ಮುಂದಾಗಿದ್ದು, ಗ್ರಾಮಸ್ಥರು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ.

By

Published : Dec 21, 2020, 10:36 PM IST

ನಿವೃತ್ತ ಯೋಧ
ನಿವೃತ್ತ ಯೋಧ

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೆವಡ್ಡಟ್ಟಿ ಗ್ರಾಮದಲ್ಲಿ ನಿವೃತ್ತ ಯೋಧನೋರ್ವ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದು, ಗ್ರಾಮಸ್ಥರು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ.

ನಿವೃತ್ತ ಯೋಧ ವೆಂಕಟೇಶ ಗೆಜ್ಜಿ 30 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಾಯಕ್ ಸುಬೇದಾರ್ ಆಗಿ ಕಳೆದ ವರ್ಷ ನಿವೃತ್ತಿಯಾಗಿದ್ದಾರೆ. ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆ ಸ್ಪರ್ಧಿಸಿದ್ದಾರೆ. ಇವರ ವಿರುದ್ಧ 5 ಜನ ಕಣಕ್ಕಿಳಿದಿದ್ದರು. ನಂತರ ಇವರ ಯೋಜನೆ, ಧ್ಯೇಯ ಕಂಡು ಸ್ಪರ್ಧಿಸುವುದು ಬೇಡವೆಂದು ಎದುರಾಳಿಗಳು ತಮ್ಮ ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ಈ ಮೂಲಕ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಹಿರೆವಡ್ಡಟ್ಟಿ ಗ್ರಾಮ ಪಂಚಾಯಿತಿ ಸದಸ್ಯನನ್ನಾಗಿ ಮಾಡಿದ್ದಾರೆ.

ನಿವೃತ್ತ ಯೋಧನನ್ನು ಸರ್ವಸಮ್ಮತದಿಂದ ಅವಿರೋಧವಾಗಿ ಆಯ್ಕೆ ಮಾಡಿದ ಗ್ರಾಮಸ್ಥರು

ವೆಂಕಟೇಶ ಗೆಜ್ಜಿ 30 ವರ್ಷ ತಮ್ಮ ಸೇವಾ ಅವಧಿಯಲ್ಲಿ ಕರ್ತವ್ಯ ನಿಷ್ಠೆಯಿಂದ ಕಾಯಕ ಮಾಡಿ ಸೇನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. 1989ರಲ್ಲಿ ಬಿಎಸ್​​​ಎಫ್ ಮೂಲಕ ಸೇನೆಗೆ ಸೇರಿ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಬಂಗಾಳ, ತ್ರಿಪುರ, ಅಸ್ಸಾಂ, ಮೇಘಾಲಯ ಹೀಗೆ ಅನೇಕ ಕಡೆ ಸೇವೆ ಸಲ್ಲಿಸಿದ್ದಾರೆ. ಒಂದು ವರ್ಷದ ಹಿಂದೆಯಷ್ಟೇ ನಿವೃತ್ತಿ ಹೊಂದಿ ಸ್ವಗ್ರಾಮ ಹಿರೆವಡ್ಡಟ್ಟಿಗೆ ಬಂದಿದ್ದಾರೆ.

ನಿವೃತ್ತಿಯಾದ ಯೋಧ ನೆಮ್ಮದಿಯ ಕಾಲ ಕಳೆಯುವ ಬದಲು ಮತ್ತೆ ಜನಸೇವಕನಾಗಿರುವುದು ಹೆಮ್ಮೆಯ ವಿಷಯ. 30 ವರ್ಷ ಭಾರತಾಂಬೆಯ ಸೇವೆ ಮಾಡಿ ಬಂದು ಈಗ ದಣಿವರಿಯದೆ ಸ್ವಗ್ರಾಮದ ಜನರ ಸೇವೆಗೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದು ಗ್ರಾಮಸ್ಥರು ಹಾಡಿ ಹೊಗಳಿದ್ದಾರೆ.

ABOUT THE AUTHOR

...view details