ಗದಗ:ಸರ್ಕಾರದಿಂದ ನೆರೆ ಪರಿಹಾರಕ್ಕಾಗಿ ಎಷ್ಟು ಹಣ ಖರ್ಚಾಗೈತಿ ಅನ್ನೋದು ನಿಮ್ಗ ಗೊತ್ತದ. ನಮ್ಗೂ ಎಂಎಲ್ಎ ಫಂಡ್ ಕೂಡ ಬರ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಅವರೇ ಜನರೆದುರು ಸರ್ಕಾರದ ಬೊಕ್ಕಸ ಖಾಲಿ ಆಗಿರುವ ಸುಳಿವು ನೀಡಿದ್ದಾರೆ.
ಸರ್ಕಾರದ ಬೊಕ್ಕಸ ಬರಿದಾಗಿದೆ, ಸ್ವಲ್ಪ ಟೈಮ್ ಕೊಡ್ರಿ: ನೆರೆ ಸಂತ್ರಸ್ತರಿಗೆ ಸಚಿವ ಪಾಟೀಲ್ ಮನವಿ - Minister CC patil in gadaga
ರೋಣ ತಾಲೂಕಿನ ಹೊಳೆ ಆಲೂರ ಗ್ರಾಮಕ್ಕೆ ಸಚಿವ ಸಿ ಸಿ ಪಾಟೀಲ್ ಭೇಟಿ ನೀಡಿದ್ದರು. ಜನರ ಸಮಸ್ಯೆ ಆಲಿಸಿದರು. ಬಳಿಕ ಮಾತನಾಡಿದ ಅವರು, ಸರ್ಕಾರದ ಬಳಿ ಸದ್ಯಕ್ಕೆ ಹಣವಿಲ್ಲ, ಬೊಕ್ಕಸ ಖಾಲಿಯಾಗಿದೆ. ಸರ್ಕಾರ ನಿಮ್ಮೊಂದಿಗಿದ್ದು, ಸ್ವಲ್ಪ ಟೈಮ್ ಕೊಡ್ರಿ, ಎಲ್ಲ ಸರಿ ಮಾಡುತ್ತೇವೆ ಎಂದು ಸಚಿವರೇ ನೆರೆ ಸಂತ್ರಸ್ತರಿಗೆ ಮನವಿ ಮಾಡಿದ್ದಾರೆ.
ರೋಣ ತಾಲೂಕಿನ ಹೊಳೆ ಆಲೂರು ಗ್ರಾಮಕ್ಕೆ ಭೇಟಿ ನೀಡಿದ್ದ ಅವರು, ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ್ರು. ಸ್ಥಳೀಯರೊಂದಿಗೆ ಮಾತನಾಡಿ, ರಸ್ತೆ ರಿಪೇರಿಗೆ ಒಂದು ಹಿಡಿ ಮಣ್ಣು ಹಾಕಿಸಲಿಕ್ಕೂ ನಮ್ಮಲ್ಲಿ ಹಣ ಇಲ್ಲ. ಎಲ್ಲವೂ ಪ್ರವಾಹದ ಪರಿಸ್ಥಿತಿ ಸುಧಾರಿಸಲು ಖರ್ಚಾಗುತ್ತಿದೆ ಎಂದು ತಮ್ಮ ಅಳಲನ್ನೇ ತೋಡಿಕೊಂಡಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಹಾಗೂ ಅರಣ್ಯ ಈ ಎರಡೂ ಖಾತೆಗಳನ್ನು ಹೊಂದಿರುವ ಸಚಿವ ಸಿ ಸಿ ಪಾಟೀಲ್, ಪ್ರವಾಹಕ್ಕೀಡಾಗಿರೋ ರೋಣ ತಾಲೂಕಿನ ಹೊಳೆ ಆಲೂರ ಗ್ರಾಮಕ್ಕೆ ಭೇಟಿ ನೀಡಿದಾಗ ಸರ್ಕಾರದ ಬಳಿ ಸದ್ಯಕ್ಕೆ ಹಣ ಇಲ್ಲ ಅನ್ನು ಸಂಗತಿಯನ್ನು ತೆರೆದಿಟ್ಟಿದ್ದಾರೆ.