ಕರ್ನಾಟಕ

karnataka

ETV Bharat / state

ಸೀಲ್​​ಡೌನ್ ಆಗುತ್ತಾ ಗದಗ ಜಿಲ್ಲೆ?: ಬ್ಯಾರಿಕೇಡ್‌ಗಳನ್ನು ಹಾಕಿ ಜನರ ಸಂಚಾರಕ್ಕೆ ನಿರ್ಬಂಧ - ಕೊರೊನಾ ವೈರಸ್​ ಅಪ್​ಡೇಟ್​

ಗದಗದಲ್ಲಿ ಜನರ ತಿರುಗಾಟವನ್ನು ಕಡಿಮೆ ಮಾಡಲು ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್​​​ಗಳನ್ನು ಹಾಕಿ ಪೊಲೀಸರು ಸಂಚಾರ ನಿರ್ಬಂಧಿಸಿದ್ದಾರೆ. ಯಾರುೂ ಕೂಡ ಅನವಶ್ಯಕವಾಗಿ ಹೊರಬರದಂತೆ ಪೊಲೀಸರು ‌ನೋಡಿಕೊಳ್ಳುತ್ತಿದ್ದಾರೆ.

The Gadag District is being sealed down
ಲಾಕ್​​​ಡೌನ್​ ಹಿನ್ನೆಲೆ ರಸ್ತೆ ಖಾಲಿ

By

Published : Apr 10, 2020, 4:41 PM IST

ಗದಗ:ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಈಗ ರಾಜ್ಯ ಸರ್ಕಾರ ಕೆಲವು ಜಿಲ್ಲೆಗಳನ್ನು ಸೀಲ್​​ಡೌನ್ ಮಾಡಲು ಮುಂದಾಗಿದೆ.

ಗದಗ ಜಿಲ್ಲೆಯನ್ನು ಕೂಡ ಸೀಲ್​​​ಡೌನ್​​​ಗೆ ಒಳಪಡಿಸುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಜಿಲ್ಲೆಯಲ್ಲಿ 80 ವರ್ಷದ ವೃದ್ಧೆ ಸೋಂಕಿನಿಂದ ಸಾವನ್ನಪ್ಪಿದ್ದರು. ಆದರೆ, ಎಲ್ಲೂ ಹೋಗದಿರುವ ಅಜ್ಜಿಗೆ ಸೋಂಕು ಹೇಗೆ ತಗುಲಿತು ಎಂಬ ಪ್ರಶ್ನೆ ಜಿಲ್ಲೆಯ ಜನರನ್ನು ಕಾಡತೊಡಗಿದೆ. ಈ ಹಿನ್ನೆಲೆಯಲ್ಲಿ ಕಚ್ಚೆಚ್ಚರವಹಿಸಲಾಗಿದೆ.

ಜೊತೆಗೆ ಅಜ್ಜಿ ಸಂಪರ್ಕದಲ್ಲಿದ್ದವರ ವರದಿಯೂ ನೆಗೆಟಿವ್ ಬಂದಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ಸಾಕಷ್ಟು ಶ್ರಮಿಸುತ್ತಿದೆ. ಜೊತೆಗೆ ಈ ವೈರಸ್ ಸಮುದಾಯಕ್ಕೆ ಹರಡಬಾರದು ಎಂಬ ದೃಷ್ಟಿಯಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಹೈಅಲರ್ಟ್ ಘೋಷಿಸಿದೆ.

ಏಕಾಏಕಿ ಸೀಲ್​​​ಡೌನ್ ಜಾರಿಯಾದರೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತದೆ ಎಂಬ ದೃಷ್ಟಿಯಿಂದಲೂ ಹಂತ ಹಂತವಾಗಿ ಮಾರುಕಟ್ಟೆ ಹಾಗೂ ರಸ್ತೆಗಳನ್ನ ಬಂದ್ ಮಾಡಲಾಗುತ್ತಿದೆ. ಗದಗ ಸೀಲ್​​ಡೌನ್ ಆಗುತ್ತೊ, ಇಲ್ಲವೋ ಎಂಬುದು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲಿದೆ.

ABOUT THE AUTHOR

...view details