ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಇಷ್ಟು ದಿನ ಮಂಕಾಗಿದ್ದ ಬಿಜೆಪಿ ಪ್ರಚಾರ ಚುರುಕು ಪಡೆದಿದೆ. ಬೆಳಗ್ಗೆಯಿಂದಲೇ ಮನೆ ಮನೆಗೆ ಕಾರ್ಯಕರ್ತರು ತೆರಳಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶಿವಕುಮಾರ್ ಉದಾಸಿ ಪರವಾಗಿ ಪ್ರಚಾರ ನಡೆಸಿದರು.
ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಿಜೆಪಿ ಭರ್ಜರಿ ಪ್ರಚಾರ - undefined
ಗದಗ -ಬೆಟಗೇರಿ ಅವಳಿ ನಗರದಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಬಿಜೆಪಿಗೆ ಮತ ಹಾಕುವಂತೆ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಮನವಿ ಮಾಡಿದರು.
![ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಿಜೆಪಿ ಭರ್ಜರಿ ಪ್ರಚಾರ](https://etvbharatimages.akamaized.net/etvbharat/images/768-512-2956573-thumbnail-3x2--anil.jpg)
ಇದಕ್ಕೂ ಮೊದಲು ಗದಗನ ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಅವರು, ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ಆರ್. ಪಾಟೀಲ್ ಅವರ ಊರು ಹುಲಕೋಟಿಯಿಂದ್ಲೇ ನಮ್ಮ ಪ್ರಚಾರ ಕಾರ್ಯ ಆರಂಭಿಸಿದ್ದೇವೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ನಡೆದ ಅಹಿತಕರ ಘಟನೆಗಳು ನಡೆಯದಂತೆ, ಎಚ್ಚರಿಕೆ ವಹಿಸಲು ಹಾಗೂ ಭದ್ರತೆ ನೀಡುವಂತೆ ಡಿಜಿ, ಐಜಿ ಅವರಿಗೆ ಮನವಿ ಮಾಡಿಕೊಂಡಿದ್ದೇವೆ ಅಂತ ಹೇಳಿದರು. ಉತ್ತರ ಪ್ರದೇಶ, ಬಿಹಾರ ಸಂಸ್ಕೃತಿ ಗದಗ ಕ್ಷೇತ್ರದಲ್ಲಿ ಇನ್ನೂ ಇದೆ ಎಂದು ಪರೋಕ್ಷವಾಗಿ ಡಿ. ಆರ್. ಪಾಟೀಲ್ ಪುತ್ರ ಸಚಿನ್ ಪಾಟೀಲ್ ವಿರುದ್ಧ ಹರಿಹಾಯ್ದರು.
ಇದೇ ವೇಳೆ ಮಾತನಾಡಿದ ಅವರು, ಮೋದಿಯವರ ಜನಪರ ಕಾರ್ಯಕ್ರಮಗಳು ಹಾಗೂ ಸಂಸದ ಶಿವಕುಮಾರ್ ಉದಾಸಿ ಅವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಬಿಜೆಪಿಗೆ ಹಾಕಿ. ಜನರು ಪಕ್ಷವನ್ನು ಗೆಲ್ಲಿಸ್ತಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ ಪ್ರತಿದಿನ ಮೂರು ವಾರ್ಡ್ ಗಳಲ್ಲಿ ಪ್ರಚಾರ ಮಾಡೋದಾಗಿ ಅನಿಲ್ ಮೆಣಸಿಕಾಯಿ ತಿಳಿಸಿದರು.