ಕರ್ನಾಟಕ

karnataka

ETV Bharat / state

ಹತ್ತು ಶಿಕ್ಷಕರಿಗೆ ಕೋವಿಡ್​, 5 ಶಾಲೆಗಳು ಬಂದ್​​: ಗದಗದಲ್ಲಿ ಕೊರೊನಾ ಕಂಟಕ

ಕಳೆದ ಒಂಭತ್ತು ತಿಂಗಳ ನಂತರ ರಾಜ್ಯಾದ್ಯಂತ ಶಾಲೆಗಳು ಆರಂಭವಾಗಿವೆ. ಮಕ್ಕಳು ಸಹ ಉತ್ಸಾಹದಿಂದ ಶಾಲೆಗೆ ಆಗಮಿಸುತ್ತಿದ್ದಾರೆ. ಇದರ ನಡುವೆ ವಿದ್ಯೆ ಕಲಿಸುವ ಶಿಕ್ಷಕರಲ್ಲಿ ಕೊರೊನಾ ಕಂಡುಬಂದ ಹಿನ್ನೆಲೆ ಶಿಕ್ಷಕರು ಹೋಮ್ ಕ್ವಾರಟೈನ್ ಆದರೆ, ವಿದ್ಯಾರ್ಥಿಗಳು ಅತಂತ್ರವಾಗಿದ್ದಾರೆ.

ಕೊರೊನಾ
ಕೊರೊನಾ

By

Published : Jan 2, 2021, 9:18 PM IST

ಗದಗ:ಜಿಲ್ಲೆಯಾದ್ಯಂತ 6,665 ಶಿಕ್ಷಕರನ್ನು ಕೋವಿಡ್ ಟೆಸ್ಟ್​ಗೆ ಒಳಪಡಿಸಲಾಗಿದ್ದು, ಈ ಪೈಕಿ 10 ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಈ ಹಿನ್ನೆಲೆ 5 ಶಾಲೆಗಳನ್ನು ಬಂದ್​ ಮಾಡಲಾಗಿದೆ.

ಕಳೆದ ಒಂಭತ್ತು ತಿಂಗಳ ನಂತರ ರಾಜ್ಯಾದ್ಯಂತ ಶಾಲೆಗಳು ಆರಂಭವಾಗಿವೆ. ಮಕ್ಕಳು ಸಹ ಉತ್ಸಾಹದಿಂದ ಶಾಲೆಗೆ ಆಗಮಿಸುತ್ತಿದ್ದಾರೆ. ಇದರ ನಡುವೆ ವಿದ್ಯೆ ಕಲಿಸುವ ಶಿಕ್ಷಕರಲ್ಲಿ ಕೊರೊನಾ ಕಂಡುಬಂದ ಹಿನ್ನೆಲೆ ಶಿಕ್ಷಕರು ಹೋಮ್ ಕ್ವಾರಟೈನ್ ಆದರೆ, ವಿದ್ಯಾರ್ಥಿಗಳು ಅತಂತ್ರವಾಗಿದ್ದಾರೆ.

ಗದಗದಲ್ಲಿ ಹತ್ತು ಶಿಕ್ಷಕರಿಗೆ ಕೋವಿಡ್​, 5 ಶಾಲೆ ಬಂದ್

ಜಿಲ್ಲೆಯ ಹತ್ತು ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಹೀಗಾಗಿ ಐದು ಶಾಲೆಗಳು ಬಂದ್​ ಆಗಿವೆ. ನಗರದ ಮೂರು ಹಾಗೂ ನರಗುಂದ ತಾಲೂಕಿನ ಜಗಾಪೂರ ಗ್ರಾಮದ ಪ್ರೌಢ ಶಾಲೆಯ ಶಿಕ್ಷಕರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಶಿಕ್ಷಣ ಇಲಾಖೆ ಈ ಐದು ಶಾಲೆಗಳಿಗೆ ಮತ್ತೊಮ್ಮೆ ಸ್ಯಾನಿಟೈಸ್​ ಮಾಡಿದೆ.

ಜಿಲ್ಲೆಯಾದ್ಯಂತ 6,665 ಶಿಕ್ಷಕರನ್ನು ಕೋವಿಡ್ ಟೆಸ್ಟ್​ಗೆ ಒಳಪಡಿಸಲಾಗಿದ್ದು, ಈ ಪೈಕಿ 10 ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಸದ್ಯ ಶಿಕ್ಷಕರು ಹೋಮ್ ಕ್ವಾರಟೈನ್ ಆಗಿದ್ದು, ಮುಂದೆ ಆರೋಗ್ಯ ಇಲಾಖೆಯ ಸಲಹೆ ಮೇರೆಗೆ ಶಾಲೆ ತೆರೆಯುವ ಕುರಿತು ನಿರ್ಧಾರ ಮಾಡಲಾಗುವುದು ಎಂದು ಗದಗ ಡಿಡಿಪಿಐ ಬಸವಲಿಂಗಪ್ಪ ತಿಳಿಸಿದ್ದಾರೆ.

ABOUT THE AUTHOR

...view details