ಗದಗ:ಇಷ್ಟು ದಿನ ಲಾಕ್ಡೌನ್ನಿಂದಾಗಿ ಬಾಗಿಲು ಹಾಕಿಕೊಂಡಿದ್ದ ದೇವಸ್ಥಾನಗಳು ಈಗ ಬಾಗಿಲು ತೆರೆದಿವೆ. ಅನೇಕ ಐತಿಹಾಸಿಕ ದೇಗುಲಗಳು ಭಕ್ತ ಸಮೂಹಕ್ಕೆ ದರ್ಶನ ಕೊಡಲು ಸಿದ್ಧವಾಗಿವೆ. ಆದರೆ, ರಾಜ್ಯದ ಬಹುತೇಕ ದೇವಾಲಯಗಳಲ್ಲಿ ಭಕ್ತರೇ ಇಲ್ಲದೆ ಖಾಲಿಯಾಗಿವೆ.
ಬಾಗಿಲನು ತೆರೆದರೂ ದೇವಾಲಯಗಳಿಗೆ ಬರುತ್ತಿಲ್ಲ ಗದಗ ಭಕ್ತರು..
ದಿನ ಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಜನ ಭಯಪಡುತ್ತಿದ್ದಾರೆ. ಕಷ್ಟದಿಂದ ಪಾರು ಮಾಡೆಂದು ದೇವರ ಮೊರೆ ಹೋಗಲೂ ಕೊರೊನಾ ಆಸ್ಪದ ಮಾಡುತ್ತಿಲ್ಲ.
ಗದಗ: ದೇವಾಲಯಗಳ ಬಾಗಿಲು ತೆರೆದರೂ ಗುಡಿ ಬಳಿ ಸುಳಿಯದ ಭಕ್ತರು
ಕೊರೊನಾ ಭಯದಿಂದ ಭಕ್ತರು ದೇವಸ್ಥಾನಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಗದಗ್ನಲ್ಲಿ ಅನೇಕ ಐತಿಹಾಸಿಕ ದೇವಸ್ಥಾನಗಳು ಭಕ್ತರಿಲ್ಲದೆ ಬಿಕೋ ಎನ್ನುತ್ತಿವೆ. ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನ, ವೀರನಾರಾಯಣ ದೇವಸ್ಥಾನ, ಸಾಯಿಬಾಬಾ ದೇವಸ್ಥಾನ ಸೇರಿ ಹಲವು ದೇವಸ್ಥಾನಗಳಲ್ಲಿ ಭಕ್ತರೇ ಮಾಯವಾಗಿದ್ದಾರೆ.
ದಿನ ಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಜನ ಭಯಪಡುತ್ತಿದ್ದಾರೆ. ಕಷ್ಟದಿಂದ ಪಾರು ಮಾಡೆಂದು ದೇವರ ಮೊರೆ ಹೋಗಲೂ ಕೊರೊನಾ ಆಸ್ಪದ ಮಾಡುತ್ತಿಲ್ಲ. ಇದರಿಂದ ಅನೇಕ ದೇವಾಲಯಗಳ ಆದಾಯಕ್ಕೂ ಕತ್ತರಿ ಬಿದ್ದಿದೆ.