ಕರ್ನಾಟಕ

karnataka

ETV Bharat / state

ನೆರೆ ನೀರಲ್ಲಿ ಕೊಚ್ಚಿ ಹೋದ ಬದುಕು... ಸಂತ್ರಸ್ತರಿಗೆ ಸ್ವಾಮಿಜಿ ಅಭಯ!

ಪ್ರವಾಹ ಪೀಡಿತ ಗ್ರಾಮಗಳ ಸಂಕಷ್ಟಕ್ಕೆ ಚಿತ್ರದುರ್ಗದ ತರಳುಬಾಳು ಮಠದ ಡಾ.ಶಿವಮೂರ್ತಿ ಸ್ವಾಮೀಜಿ ಅಭಯ ಹಸ್ತ ನೀಡಿದ್ದು, ಸಂತ್ರಸ್ತರಿಗೆ ಹಾಗೂ ಅವರ ಮಕ್ಕಳಿಗೆ ಉಚಿತ ವಸತಿ ಮತ್ತು ಶಿಕ್ಷಣ ನೀಡಲು ಮುಂದಾಗಿದ್ದಾರೆ.

ನೆರೆ ನೀರಲ್ಲಿ ಮುಳುಗಿ ಹೋದ ಸಂತ್ರಸ್ತರ ಬದುಕಿಗೆ ಸ್ವಾಮಿಜಿ ಅಭಯ

By

Published : Aug 14, 2019, 9:39 PM IST

ಗದಗ: ವರುಣಾಸುರನು ಉತ್ತರದಲ್ಲಿ ಅಟ್ಟಹಾಸ ಮೆರೆದಿದ್ದು, ಬದುಕು ಮೂರಾಬಟ್ಟೆಯಾಗಿದೆ. ನೆರೆ ಸಂತ್ರಸ್ತರು ತಮ್ಮ ಬದುಕಿನ ಬಂಡಿ ನಡೆಸುವುದು ದುಸ್ತರವಾಗಿದೆ. ಸ್ವಾಮಿ ನಮ್ಮನ್ನ ಕಾಪಾಡಿ ಅಂತ ಅಂಗಲಾಚುತ್ತಿರುವ ಸಂತ್ರಸ್ತರಿಗೆ ಹಾಗೂ ಅವರ ಮಕ್ಕಳಿಗೆ ಉಚಿತ ವಸತಿ, ಶಿಕ್ಷಣ ನೀಡಲು ಚಿತ್ರದುರ್ಗದ ತರಳುಬಾಳು ಮಠದ ಡಾ.ಶಿವಮೂರ್ತಿ ಸ್ವಾಮಿಗಳು ಮುಂದಾಗಿದ್ದಾರೆ.

ನೆರೆ ನೀರಲ್ಲಿ ಮುಳುಗಿ ಹೋದ ಸಂತ್ರಸ್ತರ ಬದುಕಿಗೆ ಸ್ವಾಮಿಜಿ ಅಭಯ!

ಮಲಪ್ರಭಾ, ಬೆಣ್ಣೆಹಳ್ಳ ನೀರಿನ ರುದ್ರನರ್ತನಕ್ಕೆ ಜಿಲ್ಲೆಯ ನಲುಗಿ ಹೋಗಿದೆ. ನರಗುಂದ ಹಾಗೂ ರೋಣ ತಾಲೂಕಿನ 13 ಹಳ್ಳಿಗಳು ಸಂಪೂರ್ಣ ಮುಳುಗಿ ಹೋಗಿವೆ. ಮುಂದೇನು ಮಾಡಬೇಕು ಅನ್ನೋದು ದಿಕ್ಕು ತೋಚದಂತಾಗಿದೆ. ಪ್ರವಾಹ ಪೀಡಿತ ಗ್ರಾಮಗಳ ಸಂಕಷ್ಟ ಪರಿಹರಿಸಲು ಚಿತ್ರದುರ್ಗದ ತರಳುಬಾಳು ಮಠದ ಡಾ.ಶಿವಮೂರ್ತಿ ಸ್ವಾಮೀಜಿ ಅಭಯ ಹಸ್ತ ನೀಡಿದ್ದಾರೆ.

ರೋಣ ತಾಲೂಕಿನ ಹೊಳೆ ಆಲೂರ ಗ್ರಾಮಕ್ಕೆ ಆಗಮಿಸಿ, ಸಂತ್ರಸ್ತರ ನೋವು ಕೇಳಿ ಮಮ್ಮಲ ಮರುಗಿದ ಅವರು ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ರು. ಸಂತ್ರಸ್ತರ ಮಕ್ಕಳಿಗೆ ಉಚಿತ ವಸತಿ ಶಿಕ್ಷಣ ನೀಡುವುದಾಗಿ ಶ್ರೀಗಳು ಭರವಸೆ ನೀಡಿದ್ದಾರೆ. 5ನೇ ತರಗತಿಯಿಂದ ಪದವಿವರೆಗೂ ಉಚಿತ ವಸತಿ, ಶಿಕ್ಷಣ ನೀಡುವುದಾಗಿ ತಿಳಿಸಿದ್ದಾರೆ.

ಚಿತ್ರದುರ್ಗದ ತರಳಬಾಳು ಮಠದಿಂದ ಊಟ-ಉಪಹಾರ ತಂದಿದ್ದು, ಸಾವಿರಾರು ಮಹಿಳೆಯರಿಗೆ ಸೀರೆ, ಮಕ್ಕಳಿಗೆ ಬಟ್ಟೆಗಳು ಸೇರಿದಂತೆ ವಿವಿಧ ಸಾಮಗ್ರಿಗಳನ್ನ ವಿತರಣೆ ಮಾಡಿದ್ರು. ನಿಮ್ಮ ಪರಿಸ್ಥಿತಿ ನೋಡಿ ಮನಸಿಗೆ ಬಹಳ ನೋವಾಗಿದೆ. ಇಂಥ ಸ್ಥಿತಿ ಯಾರಿಗೂ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಈ ವೇಳೆ ಓರ್ವ ಸಂತ್ರಸ್ತ ಅಳಲು ತೋಡಿಕೊಂಡು, ಸ್ವಾಮೀಜಿ ನಮ್ಮ ಬದುಕು ಬೀದಿಗೆ ಬಂದಿದೆ. ಎಲ್ಲವೂ ಇದ್ದು ಇವತ್ತು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ನಮಗೆ ಇರೋಕೆ ಸೂರು ಕೊಡಿ ಎಂದು ಕಣ್ಣೀರು ಹಾಕಿದರು.

ABOUT THE AUTHOR

...view details