ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಪ್ರವಾಸಿ ಮಂದಿರದ ಆವರಣದಲ್ಲಿ ಹಕ್ಕಿಗಳು ಸತ್ತು ಬಿದ್ದಿದ್ದು, ಜನರನ್ನು ಆತಂಕಕ್ಕೀಡು ಮಾಡಿದೆ.
ಗದಗದಲ್ಲೂ ಶುರುವಾಯ್ತು ಹಕ್ಕಿಜ್ವರದ ಭೀತಿ! - Bird flu in Gadag district
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಹಕ್ಕಿಗಳು ಸತ್ತು ಬಿದ್ದಿವೆ. ಇದು ಹಕ್ಕಿಜ್ವರದ ಪರಿಣಾಮವಾ ಎಂಬ ಭೀತಿ ಜಿಲ್ಲೆಯಲ್ಲಿ ಶುರುವಾಗಿದೆ.
![ಗದಗದಲ್ಲೂ ಶುರುವಾಯ್ತು ಹಕ್ಕಿಜ್ವರದ ಭೀತಿ! bird-flu](https://etvbharatimages.akamaized.net/etvbharat/prod-images/768-512-10214386-thumbnail-3x2-sanju.jpg)
ಹಕ್ಕಿಜ್ವರ
ಹಕ್ಕಿ ನರಳುತ್ತಿರುವುದು
ಹಕ್ಕಿಗಳು ಸತ್ತು ಬಿದ್ದಿರುವುದನ್ನು ಕಂಡು ಸ್ಥಳೀಯರು ಭಯ ಭೀತರಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಸತ್ತುಬಿದ್ದ ಹಕ್ಕಿಗಳ ಸುತ್ತ ಸುಮಾರು 100 ಮೀ ವ್ಯಾಪ್ತಿಯಲ್ಲಿ ಸಾರ್ವಜನಿಕರು ಬರದಂತೆ ಎಚ್ಚರಿಕೆ ನೀಡಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ಸತ್ತು ಬಿದ್ದ ಹತ್ತಾರು ಹಕ್ಕಿಗಳನ್ನು ಪರೀಕ್ಷೆಗೊಳಪಡಿಸಲು ಮುಂದಾಗಿದ್ದಾರೆ.
ಓದಿ:10 ರಾಜ್ಯಗಳಲ್ಲಿ ಹಕ್ಕಿ ಜ್ವರ ದೃಢ, ಮಾನವರಲ್ಲಿ ಸೋಂಕು ಹರಡುವಿಕೆಯ ಬಗ್ಗೆ ವೈಜ್ಞಾನಿಕ ವರದಿ ಇಲ್ಲ: ಕೇಂದ್ರ