ಗದಗ: ಮತ್ತೆ ಸುರಿದ ಧಾರಾಕಾರ ಮಳೆಗೆ ಮಲಪ್ರಭಾ ಹಾಗೂ ಬೆಣ್ಣೆಹಳ್ಳ ಪ್ರವಾಹ ಹೆಚ್ಚಿದ ಪರಿಣಾಮ ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ಹಲವಾರು ಗ್ರಾಮಗಳು ಮುಳಗಡೆಯಾಗೋ ಭೀತಿಯಲ್ಲಿವೆ. ಹೀಗಾಗಿ ಅಲ್ಲಿನ ಜನರು ವರುಣ ದೇವನ ಶಾಂತಿಗಾಗಿ ಭಗವಂತನ ಮೊರೆ ಹೋಗಿದ್ದಾರೆ.
ಶಾಂತಳಾಗು ಗಂಗೆ: ಪೂಜೆ ಮೂಲಕ ಸುರಕೋಡ ಗ್ರಾಮಸ್ಥರ ಪ್ರಾರ್ಥನೆ - ಇತ್ತೀಚಿನ ಗದಗ ಸುದ್ದಿ
ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಇದೀಗ ಸಾರ್ವಜನಿಕರು ದೇವರ ಮೊರೆ ಹೋಗಿದ್ದಾರೆ.
ಈಗಾಗಲೇ ಗದಗ ಜಿಲ್ಲೆಯಲ್ಲಿ ಎರೆಡು ಬಾರಿ ಪ್ರವಾಹ ಬಂದು ಇಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದೀಗ ಮೂರನೇ ಬಾರಿಯ ಮಳೆಗೆ ರೋಸಿ ಹೋಗಿರೋ ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಗ್ರಾಮಸ್ಥರು ಗಂಗೆಯ ಪೂಜೆ ಮಾಡಿದ್ದಾರೆ.
ಬೆಣ್ಣೆ ಹಳ್ಳದಲ್ಲಿ ಗಂಗಾಮಾತೆ ಪೂಜೆ ಮಾಡುವ ಮೂಲಕ ಶಾಂತಳಾಗು ತಾಯೆ ಅಂತಾ ಪ್ರಾರ್ಥಿಸಿದ ಜನರು, ಅಹಿತಕರ ಘಟನೆಗಳಾಗದಿರಲಿ ಅಥವಾ ಯಾವುದೇ ಪ್ರಾಣಹಾನಿ ಸಂಭವಿಸದಿರಲಿ ಎಂದು ಗಂಗಾಮಾತೆಗೆ ಮೊರೆಯಿಟ್ಟಿದ್ದಾರೆ. ಸುರಕೋಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸೋ ಸೇತುವೆ ಕಡಿತಗೊಂಡು ಊರಿಗೆ ಬೆಣ್ಣೆಹಳ್ಳ ನೀರು ನುಗ್ಗಿದ್ದಕ್ಕೆ ಜನ ದೇವರ ಮೊರೆ ಹೋಗಿದ್ದಾರೆ.