ಗದಗ :ಶಾಲೆಗೆ ಹೋಗಬೇಕು ಬಸ್ ಹತ್ತಲು ಬಿಡಿ ಎನ್ನುವ ವಿದ್ಯಾರ್ಥಿಗಳ ಮನವಿಗೆ ವಿರೋಧ ವ್ಯಕ್ತಪಡಿಸಿದ ಕಂಡಕ್ಟರ್ ಜೊತೆ ವಿದ್ಯಾರ್ಥಿಗಳು ವಾಗ್ವಾದ ನಡೆಸಿರೋ ಘಟನೆ ನಗರದ ಮುಳಗುಂದ ನಾಕಾ ಬಳಿ ನಡೆದಿದೆ.
ಬಸ್ ಹತ್ತೋ ವಿಚಾರ: ಕಂಡಕ್ಟರ್ ಹಾಗೂ ವಿದ್ಯಾರ್ಥಿಗಳ ನಡುವೆ ವಾಗ್ವಾದ - ಗದಗ ಕಂಡಕ್ಟರ್ ವಿದ್ಯಾರ್ಥಿಗಳ ಜಗಳ ಸುದ್ದಿ
ಕಂಡಕ್ಟರ್ ಮತ್ತು ವಿದ್ಯಾರ್ಥಿಗಳ ನಡುವೆ ನಡೆದ ವಾಗ್ವಾದ ತಾರಕಕ್ಕೇರಿದ ಘಟನೆ ಗದಗ ನಗರದ ಮುಳುಗುಂದ ನಾಕಾ ಬಳಿ ನಡೆದಿದ್ದು, ವಿದ್ಯಾರ್ಥಿಯೊಬ್ಬನ ಬಟ್ಟೆಯನ್ನು ಕಂಡಕ್ಟರ್ ಹರಿದು ಹಾಕಿದ್ದಾರೆ.
ಕಂಡಕ್ಟರ್ ಹಾಗೂ ವಿದ್ಯಾರ್ಥಿಗಳ ನಡುವೆ ವಾಗ್ವಾದ
ಲಕ್ಷ್ಮೇಶ್ವರದಿಂದ ಗದಗ ನಗರಕ್ಕೆ ಬಂದ ಬಸ್‌ಗೆ ವಿದ್ಯಾರ್ಥಿಗಳು ಹತ್ತಲು ಮುಂದಾದಾಗ ಬಸ್ ಕಂಡಕ್ಟರ್ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವಾಗ್ವಾದ ಆರಂಭವಾಗಿದೆ. ಈ ವೇಳೆ ವಿದ್ಯಾರ್ಥಿಯೊಬ್ಬನ ಸ್ಕೂಲ್ ಯೂನಿಫಾರ್ಮನ್ನು ಕಂಡಕ್ಟರ್ ಹರಿದ ಪ್ರಸಂಗವೂ ನಡೆಯಿತು.
ಜಗಳವನ್ನು ಸಾರ್ವಜನಿಕರು ತಿಳಿಗೊಳಿಸಿದ್ದು, ಯೂನಿಫಾರ್ಮ್ ಹರಿದ ಕಂಡಕ್ಟರ್ ವರ್ತನೆಗೆ ವಿದ್ಯಾರ್ಥಿಗಳು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.