ಕರ್ನಾಟಕ

karnataka

ETV Bharat / state

ರಟ್ಟಿನ ಬಾಕ್ಸ್​ನಲ್ಲಿ ಮಗು ಇಟ್ಟು ಹೋದ ಅಪರಿಚಿತರು: ನವಜಾತ ಶಿಶು ಬಿಟ್ಟೋದ ಪೋಷಕರಿಗಾಗಿ ಹುಡುಕಾಟ - ETV Bharath Kannada

ಗದಗದ ಎಪಿಎಂಸಿ ಆವರಣದ ಕಟ್ಟಡವೊಂದರಲ್ಲಿ ರಟ್ಟಿನ ಬಾಕ್ಸ್​ನಲ್ಲಿ ಆಗತಾನೆ ಜನಿಸಿದ ಗಂಡು ಮಗುವನ್ನು ಅಪರಿಚಿತರು ಬಿಟ್ಟುಹೋಗಿದ್ದಾರೆ. ಅದರ ಪೋಷಕರಿಗಾಗಿ ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದಾರೆ.

stranger left the child in a cardboard box in Gadaga
ರಟ್ಟಿನ ಬಾಕ್ಸ್​ನಲ್ಲಿ ಮಗು ಇಟ್ಟು ಹೋದ ಅಪರಿಚಿತರು

By

Published : Nov 28, 2022, 4:45 PM IST

ಗದಗ:ಬಹುತೇಕರು ಮದುವೆಯಾದ ಬಳಿಕ ಮಗು ಜನಿಸಿದರೆ ಸಂಭ್ರಮಿಸಿ ಸಿಹಿ ಹಂಚುತ್ತಾರೆ. ಆದ್ರೆಆಗತಾನೆ ಹುಟ್ಟಿದ ಗಂಡು ಹಸುಗೂಸನ್ನು ಯಾರೋ ಪಾಪಿಗಳು ರಟ್ಟಿನ ಬಾಕ್ಸ್​ನಲ್ಲಿ ಹಾಕಿ ಇಟ್ಟುಹೋದ ಮನಕಲಕುವ ಘಟನೆ ನಗರದ ಎಪಿಎಂಸಿ ಆವರಣದ ಕಟ್ಟಡವೊಂದರಲ್ಲಿ ನಡೆದಿದೆ.

ಅಪರಿಚಿತರು ಹಸುಗೂಸನ್ನು ರಟ್ಟಿನ ಬಾಕ್ಸ್​ನಲ್ಲಿಟ್ಟು ಅದರ ಮೇಲೆ ಬೆಡ್​ಶೀಟ್​ ಅನ್ನು ಮುಚ್ಚಿದ್ದಾರೆ. ಬಳಿಕ ಅದನ್ನು ತಂದು ಎಪಿಎಂಸಿ ಆವರಣದ ಕಟ್ಟಡವೊಂದರಲ್ಲಿ ಇಟ್ಟು ಹೋಗಿದ್ದಾರೆ. ಅಲ್ಲಿಯೇ ಇದ್ದ ಜನರಿಗೆ ಹಸುಗೂಸಿನ ಅಳುವ ಶಬ್ದ ಕೇಳಿಸಿದೆ. ಬಳಿಕ ಆ ಡಬ್ಬಿಯನ್ನು ತೆರೆದು ನೋಡಿದಾಗ ಮಗು ಇದ್ದಿದ್ದು ಬೆಳಕಿಗೆ ಬಂದಿದೆ.

ತಕ್ಷಣ ಯುವಕನೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಸುಗೂಸನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ. ಇನ್ನು, ಪೋಷಕರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಜನರು ಏನಾದರೂ ಹಸುಗೂಸನ್ನು ನೋಡದೇ ಹೋಗಿದ್ದರೆ, ನಾಯಿ, ಹಂದಿಗಳ ಪಾಲಾಗುತ್ತಿತ್ತು. ಹಸುಗೂಸನ್ನ ಬಾಕ್ಸ್​ನಲ್ಲಿಟ್ಟು ಹೋದ ಪಾಪಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ನದಿಯಲ್ಲಿ ತೇಲಿಬಂದ 'ಗಂಗೆ'.. ಜನರಿಂದ 15 ದಿನದ ಹೆಣ್ಣು ಮಗುವಿನ ರಕ್ಷಣೆ

ABOUT THE AUTHOR

...view details