ಕರ್ನಾಟಕ

karnataka

ಗದಗನಲ್ಲಿ ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯುತ್ತಿದ್ದಾರೆ 14,210 ವಿದ್ಯಾರ್ಥಿಗಳು

ಜಿಲ್ಲೆಯಲ್ಲಿ ಒಟ್ಟು 58 ಪರೀಕ್ಷಾ ಕೇಂದ್ರಗಳನ್ನ ತೆರೆಯಲಾಗಿದೆ. ಇದರಲ್ಲಿ 7 ಉಪ ಕೇಂದ್ರಗಳನ್ನು ಸಹ ಶಿಕ್ಷಣ ಇಲಾಖೆ ತೆರೆದಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಕಂಟೇನ್ಮೆಂಟ್ ಪ್ರದೇಶದ 33 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯ ಜೊತೆಗೆ N-95 ಮಾಸ್ಕ್​ಗಳನ್ನ ವಿತರಿಸಲಾಗಿದೆ.

By

Published : Jun 25, 2020, 12:18 PM IST

Published : Jun 25, 2020, 12:18 PM IST

ಗದಗನಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭ
ಗದಗನಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭ

ಗದಗ: ಸಕಲ ಸಿದ್ಧತೆಯೊಂದಿಗೆ ಇಂದಿನಿಂದ ಗದಗ ಜಿಲ್ಲೆಯಲ್ಲಿ ‌ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭವಾಗಿದ್ದು, ಜಿಲ್ಲೆಯಾದ್ಯಂತ ಒಟ್ಟು 14,210 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 58 ಪರೀಕ್ಷಾ ಕೇಂದ್ರಗಳನ್ನ ತೆರೆಯಲಾಗಿದೆ. ಇದರಲ್ಲಿ 7 ಉಪ ಕೇಂದ್ರಗಳನ್ನು ಸಹ ಶಿಕ್ಷಣ ಇಲಾಖೆ ತೆರೆದಿದೆ. ಮುಂಜಾಗ್ರತಾ ಕ್ರಮವಾಗಿ ಕಂಟೇನ್ಮೆಂಟ್ ಪ್ರದೇಶದ 33 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯ ಜೊತೆಗೆ N-95 ಮಾಸ್ಕ್​ಗಳನ್ನ ವಿತರಿಸಲಾಗಿದೆ.

ಗದಗನಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭ

ಕಂಟೇನ್ಮೆಂಟ್ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಲಾಗಿದೆ.‌ ಕಂಟೇನ್ಮೆಂಟ್ ಪ್ರದೇಶದ ವಿದ್ಯಾರ್ಥಿಗಳಿಗೆ 122 ಕೆಎಸ್​ಆರ್​ಟಿಸಿ ಬಸ್, 31ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿದೆ.

ಪರೀಕ್ಷೆ ಆರಂಭಕ್ಕೂ ಮುನ್ನ ಹಲವು ಕಡೆ ಲಾಕ್ ಡೌನ್ ನಿಯಮಗಳನ್ನ ಉಲ್ಲಂಘನೆ ಮಾಡಿರೋದು ಕಂಡುಬಂತು. ಜೊತೆಗೆ ಹಲವು ಕಡೆ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಮರೆತು ಗುಂಪು ಗುಂಪಾಗಿ ಸೇರಿದ್ದರು. ಹೀಗಾಗಿ ಅಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು ಪರೀಕ್ಷಾ ಕೇಂದ್ರದ ಸಿಬ್ಬಂದಿಗೆ ಈ ಬಗ್ಗೆ ತಿಳಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸಿದರು.

ABOUT THE AUTHOR

...view details