ಗದಗ:ಕೊರೊನಾ ಭೀತಿಯಿಂದ ಲಾಕ್ಡೌನ್ ಮಾಡಿದ ಪರಿಣಾಮ ಅತಂತ್ರಕ್ಕೊಳಗಾದ ಬಡ ಕುಟುಂಬಗಳಿಗೆ ತಾತ್ಕಾಲಿಕವಾಗಿ ದಿನಸಿ ವಸ್ತುಗಳನ್ನು ಖರೀದಿಸಲು ಗ್ರಾಮದ ಸಾಹುಕಾರ ಕುಟುಂಬವೊಂದು 500 ರೂ. ಚೆಕ್ ವಿತರಣೆ ಮಾಡಿರುವ ಘಟನೆ ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ನಡೆದಿದೆ.
1 ವಾರದಿಂದ ಆಹಾರ ಧಾನ್ಯಗಳ ವಿತರಣೆ:ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ರಾಷ್ಟ್ರಾಧ್ಯಕ್ಷ ಪ್ರಭಣ್ಣ ಹುಣಸಿಕಟ್ಟಿ ಅವರ ಕುಟುಂಬ ಗ್ರಾಮದ ಬಡ ಜನರ ಬೆನ್ನಿಗೆ ನಿಂತಿದೆ. ಅಷ್ಟೇ ಅಲ್ಲ, ಹೊಂಬಳ ಗ್ರಾಮದ ನೂರಾರು ಬಡ ಕುಟುಂಬಗಳಿಗೆ ಕಳೆದೊಂದು ವಾರದಿಂದ ಆಹಾರ ಧಾನ್ಯಗಳ ವಿತರಣೆ ಜೊತೆಗೆ ಅನೇಕ ವಸ್ತುಗಳನ್ನ ಧಾನ-ಧರ್ಮ ಮಾಡುವ ಮೂಲಕ ಆಸರೆಯಾಗುತ್ತಿದ್ದಾರೆ.