ಗದಗ:ಕಿತ್ತು ತಿನ್ನುವ ಬಡತನದ ನಡುವೆಯೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಶೇ.90.80 ಅಂಕ ಗಳಿಸಿ ವಿದ್ಯಾರ್ಥಿನಿ ಓಂಕಾರಿ ಕಲಾಲ್ ಗಮನಾರ್ಹ ಸಾಧನೆ ಮಾಡಿದ್ದಾಳೆ.
ಹುಟ್ಟುತ್ತಲೇ ತಾಯಿ ಸಾವು, ತಂದೆಗೆ ಪಾರ್ಶ್ವವಾಯು: ಇಂಗ್ಲಿಷ್ ಮೀಡಿಯಂನಲ್ಲಿ ಶೇ.90 ಅಂಕ ಗಳಿಸಿದ ಛಲಗಾತಿ - SSLC Exam result
ಹುಟ್ಟುತಲೇ ತಾಯಿ ಸಾವು, ಬೆಳೆಯುತ್ತಾ ತಂದೆಗೆ ಪಾರ್ಶ್ವವಾಯು, ಪ್ರತಿದಿನ ಊದುಕಡ್ಡಿ(ಅಗರಬತ್ತಿ) ಫ್ಯಾಕ್ಟರಿಯಲ್ಲಿ ₹ 50-100 ದುಡಿಯುತ್ತಿದ್ದ ವಿದ್ಯಾರ್ಥಿನಿ ಓಂಕಾರಿ ಕಲಾಲ್, ಸಾಧನೆಗೆ ಬಡತನ ಅಡ್ಡಿ ಅಲ್ಲ ಎಂಬುದನ್ನು ಉತ್ತಮ ಅಂಕ ಗಳಿಸುವ ಮೂಲಕ ತೋರಿಸಿದ್ದಾಳೆ.
ಹುಟ್ಟುತ್ತಲೇ ತಾಯಿ ಸಾವನ್ನಪ್ಪಿದ್ದರು. ಬೆಳೆಯುತ್ತಾ ತಂದೆ ಪಾರ್ಶ್ವವಾಯುಗೆ ಒಳಗಾದರು. ಊದುಕಡ್ಡಿ(ಅಗರಬತ್ತಿ) ಫ್ಯಾಕ್ಟರಿಯಲ್ಲಿ ಪ್ರತಿದಿನ ₹ 50-100 ದುಡಿಯುತ್ತಾ ಬದುಕಿನ ಬಂಡೆ ಎಳೆಯುತ್ತಿದ್ದ ಓಂಕಾರಿ ಕಲಾಲ್, ಸಾಧನೆಗೆ ಬಡತನ ಅಡ್ಡಿ ಅಲ್ಲ ಎಂಬುದನ್ನು ಸಾಬೀತು ಮಾಡಿದ್ದಾಳೆ.
ಮುಂದೆ ಐಎಎಸ್ ಮಾಡುವ ಕನಸು ಕಂಡಿರುವ ಓಂಕಾರಿ, ಜೀವನ ಅದಕ್ಕೆ ಸಹಕರಿಸಬೇಕಲ್ಲವೇ ಎಂದು ಬೇಸರ ವ್ಯಕ್ತಪಡಿಸುತ್ತಾಳೆ. ಯಾರಾದರೂ ದಾನಿಗಳು ನನ್ನ ಓದಿಗೆ ನೆರವಾದರೆ ಅಂದುಕೊಂಡಿರುವ ಗುರಿಯನ್ನು ಮುಟ್ಟುವೆ ಎಂದು ಭರವಸೆಯ ಮಾತುಗಳನ್ನಾಡಿದ್ದಾಳೆ. ಈ ಛಲಗಾತಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ್ದಾಳೆ.