ಕರ್ನಾಟಕ

karnataka

ETV Bharat / state

ಕೊರೊನಾ ಎಫೆಕ್ಟ್: ಕ್ಯಾರೆಟ್​ ಬೆಳೆಗಾರರಿಗೆ 'ಕ್ಯಾ ರೇಟ್'​ ಅಂತ ಕೇಳೋರೇ ಇಲ್ಲ - ಕ್ಯಾರೇಟ್​​​ ಬೆಳೆ ನಷ್ಟ

ಗದಗದ ಬೆಣಕೊಪ್ಪ, ನಾಗರಾಳ ಗ್ರಾಮದಲ್ಲಿ ರೈತರು ಬೆಳೆದ ಕ್ಯಾರೆಟ್​ ಬೆಳೆಗೆ ಸೂಕ್ತ ಬೆಲೆ ಸಿಗದ ಪರಿಣಾಮ ಬೆಳೆಯನ್ನು ಜಮೀನಿನಲ್ಲೇ ಬಿಡುತ್ತಿದ್ದಾರೆ.

spoiled-carrot-crop-in-gadag
ಕ್ಯಾರೇಟ್​​​ ಬೆಳೆ ನಷ್ಟ

By

Published : Apr 21, 2020, 11:35 AM IST

ಗದಗ:ಲಾಕ್​​ಡೌನ್​​​ ಹಿನ್ನೆಲೆಯಲ್ಲಿ ಜಿಲ್ಲೆಯ ಬೆಣಕೊಪ್ಪ, ನಾಗರಾಳ ಗ್ರಾಮದಲ್ಲಿ ತಾವು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ವೇಳೆ ಮಾರುಕಟ್ಟೆಗೆ ಸಾಗಿಸಿದರೂ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಜಮೀನಿನಲ್ಲೇ ಹಾಳಾದ ಗಜ್ಜರಿ

ಒಂದೂವರೆ ಎಕರೆ ಜಮೀನಿನಲ್ಲಿ ಗಜ್ಜರಿ ಬೆಳೆದಿದ್ದು, ಅದಕ್ಕೆ ಸುಮಾರು ₹ 80 ಸಾವಿರ ಖರ್ಚು ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದ ಕಾರಣ ಬೆಳೆಗೆ ವ್ಯಯಿಸಿದ್ದ ಖರ್ಚು ಸಹ ಸಿಗದಾಗಿದೆ ಎಂದು ಬೆಣಕೊಪ್ಪ ಗ್ರಾಮದ ರೈತ ಪ್ರಕಾಶ್ ಬಿಂಗಿ ಅಳಲು ತೋಡಿಕೊಂಡರು.

ಅಳಲು ತೋಡಿಕೊಂಡ ರೈತ

ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಿಂಟಾಲ್​​ ಗಜ್ಜರಿಗೆ (ಕ್ಯಾರೇಟ್​) ಕೇವಲ‌ ₹ 300-400ಕ್ಕೆ ಕೇಳುತ್ತಾರೆ. ಲಾಕ್​​​ಡೌನ್ ಇಲ್ಲದಿದ್ದರೆ, ಕ್ವಿಂಟಾಲ್ ₹ 3000-4000 ಇರುತ್ತಿತ್ತು. ಸುಮಾರು ₹ 2 ಲಕ್ಷವರೆಗೂ ಲಾಭ ಬರುತಿತ್ತು. ಆದರೆ, ಈಗ ಬಂದ ಬೆಳೆ ದಲ್ಲಾಳಿಗಳಿಗೆ, ವ್ಯಾಪಾರಿಗಳಿಗೆ ಲಾಭ ತಂದುಕೊಡುತ್ತಿದೆ. ಹೀಗಾಗಿ ನಾವು ನಷ್ಟ ಅನುಭವಿಸಬೇಕಾಗಿದೆ ಎನ್ನುತ್ತಾರೆ ರೈತ ಪ್ರಕಾಶ್ ಬಿಂಗಿ.

ABOUT THE AUTHOR

...view details