ಕರ್ನಾಟಕ

karnataka

ETV Bharat / state

'ನಿಜಾಮುದ್ದೀನ್‌ಗೆ ತೆರಳಿದವರು ಕೋವಿಡ್‌-19 ಪರೀಕ್ಷೆಗೊಳಗಾಗಿ, ಇಲ್ಲದಿದ್ರೇ..' - ಎಸ್​ಪಿ ಯತೀಶ್​

ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ವೈರಸ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಯಾವುದೇ ಸಮುದಾಯದ ಭಾವನೆಗೆ ಧಕ್ಕೆ ಬರುವ ಕೆಲಸವನ್ನ ಏನಾದ್ರೂ ಮಾಡಿದ್ರೆ ಅಂತವರ ವಿರುದ್ಧವೂ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಖಡಕ್‌ ಆಗಿ ಹೇಳಿದರು.

SP Yatish
ಎಸ್​ಪಿ ಯತೀಶ್​

By

Published : Apr 10, 2020, 7:48 PM IST

ಗದಗ :ನಿಜಾಮುದ್ದೀನ್‌ ಪ್ರಾರ್ಥನೆಯಲ್ಲಿ ಭಾಗಿಯಾದವರು ಸ್ವಯಂ ಪ್ರೇರಿತವಾಗಿ ಕೋವಿಡ್​-19 ಪರೀಕ್ಷೆಗೊಳಗಾಗಬೇಕು ಇಲ್ಲದಿದ್ರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಸ್​ಪಿ ಯತೀಶ್​ ಅವರು ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಕುರಿತಂತೆ ಎಸ್​ಪಿ ಯತೀಶ್ ಎಚ್ಚರಿಕೆ..​

ಈಗಾಗಲೇ ನಿಜಾಮುದ್ದೀನ್​ ಪ್ರಾರ್ಥನೆಯಲ್ಲಿ ಭಾಗಿಯಾದ ಸಾಕಷ್ಟು ಜನರಿಗೆ ಕೊರೊನಾ ಪಾಸಿಟಿವ್ ಅಂತಾ ಬಂದಿದೆ. ಸಮಾಜದ, ನಿಮ್ಮ ಕುಟುಂಬದ ಹಿತದೃಷ್ಟಿಯಿಂದ ಪರೀಕ್ಷೆಗೊಳಗಾಗಿ. ಒಂದು ವೇಳೆ ಅದನ್ನು ರಹಸ್ಯವಾಗಿ ಇಟ್ಟಲ್ಲಿ ಅದು ನಮ್ಮ ಮಾಹಿತಿಯಿಂದ ಗೊತ್ತಾಗಿಯೇ ಗೊತ್ತಾಗುತ್ತೆ. ನಂತರ ಕಾನೂನು ರೀತಿಯ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಸ್ಪಿ ಎಚ್ಚರಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ವೈರಸ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಯಾವುದೇ ಸಮುದಾಯದ ಭಾವನೆಗೆ ಧಕ್ಕೆ ಬರುವ ಕೆಲಸವನ್ನ ಏನಾದ್ರೂ ಮಾಡಿದ್ರೆ ಅಂತವರ ವಿರುದ್ಧವೂ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಖಡಕ್‌ ಆಗಿ ಹೇಳಿದರು. ಅಲ್ಲದೇ ಸಾರ್ವಜನಿಕರು ರಾತ್ರಿ ವೇಳೆಯಲ್ಲಿ ಆರೋಗ್ಯ ಸಮಸ್ಯೆ ಏನಾದರೂ ಸಂಭವಿಸಿದ್ರೆ ಪೊಲೀಸ್ ಸಹಾಯವಾಣಿಗೆ ಫೋನ್ ಮಾಡಿ. ಅಂತಹ ಸಂದರ್ಭದಲ್ಲಿ ವಾಹನದ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ABOUT THE AUTHOR

...view details