ಗದಗ:ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕಿದ್ದೇ ತಡ ಮುಂಜಾನೆ 7 ಗಂಟೆಯಿಂದಲೇ ನಗರದ ಲಕ್ಷ್ಮೇಶ್ವರ ರಸ್ತೆಯಲ್ಲಿ ಇರುವ ಎಂಎಸ್ಐಲ್ ಮದ್ಯದ ಅಂಗಡಿ ಎದುರು ಜನರು ನೆರೆದಿದ್ದು, ಈ ನಡುವೆ ಕಡುಕನೊಬ್ಬ ಕೈ ಮುಗಿದು ಎಣ್ಣೆ ಖರೀದಿಗೆ ಮುಂದಾದ ದೃಶ್ಯ ಕಂಡುಬಂತು.
ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಅಂತಾ ಈ ಹಿಂದೆ ಜಿಲ್ಲಾಡಳಿತ ಅದೆಷ್ಟೋ ಬಾರಿ ಜನರಿಗೆ ಜಾಗೃತಿ ಮೂಡಿಸಿದ್ದರೂ, ಕೆಲವೆಡೆ ಇದನ್ನು ಜನರು ನಿರ್ಲಕ್ಷಿಸಿದ್ದು ಕಂಡು ಬಂದಿತ್ತು, ಆದ್ರೀಗ ಇದಕ್ಕೆ ಅಪವಾದವೆಂಬಂತೆ ಎಣ್ಣೆ ಖರೀದಿಯ ನಡುವೆಯೂ ಅಂತರವನ್ನು ಚಾಚೂ ತಪ್ಪದೇ ಪಾಲಿಸಿದ್ದಾರೆ.