ಕರ್ನಾಟಕ

karnataka

ETV Bharat / state

ಗದಗ: ತೋಟದಲ್ಲಿ ಸಾಕಿದ್ದ ಕೋಳಿಯನ್ನು ದಿನಕ್ಕೊಂದರಂತೆ ನುಂಗುತ್ತಿದ್ದ ನಾಗರಹಾವು ಸೆರೆ!

ಕಣವಿ ಹೊಸೂರಿನ ಮಂಜುನಾಥ್ ಮಡಿವಾಳರ ತೋಟದಲ್ಲಿ ಮನೆ ಮಾಡಿದ್ದ ನಾಗರ ಹಾವನ್ನು ಉರಗ ಪ್ರೇಮಿ ವಿಜಯ್ ಸೆರೆಹಿಡಿದು ಸುರಕ್ಷಿತವಾಗಿ ಕಪ್ಪತಗುಡ್ಡದಲ್ಲಿ ಬಿಟ್ಟಿದ್ದಾರೆ.

snake rescude
ನಾಗರಹಾವು ಸೆರೆ

By

Published : Sep 29, 2020, 4:04 PM IST

ಗದಗ:ಇಟ್ಟಿಗೆಗಳ ಗೂಡಿನ ಮಧ್ಯದಲ್ಲಿ ಅವಿತು ಕೂತಿದ್ದ ಉರಗವೊಂದನ್ನು ಸೆರೆ ಹಿಡಿದ ಘಟನೆ ಗದಗ ತಾಲೂಕಿನ ಕಣವಿ ಹೊಸೂರಿನಲ್ಲಿ ನಡೆದಿದೆ.

ಕಣವಿ ಹೊಸೂರಿನ ಮಂಜುನಾಥ್ ಮಡಿವಾಳರ ಎಂಬುವರ ತೋಟದಲ್ಲಿ ಮನೆ ಮಾಡಿದ್ದ ನಾಗರ ಹಾವು, ದಿನಕ್ಕೊಂದರಂತೆ ತೋಟದಲ್ಲಿ ಸಾಕಿದ್ದ ಕೋಳಿ ಮರಿಗಳನ್ನು ನುಂಗುತ್ತಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಮನೆಯವರು ಇಟ್ಟಿಗೆಯಲ್ಲಿ ಮನೆ ಮಾಡಿ ಅವಿತುಕೂತಿದ್ದ ನಾಗರ ಹಾವನ್ನು ಪತ್ತೆ ಹಚ್ಚಿ ಗದಗದ ಉರಗ ಪ್ರೇಮಿ ವಿಜಯ್ ಎಂಬುವರಿಗೆ ಮಾಹಿತಿ ತಿಳಿಸಿದ್ದಾರೆ.

ಕೋಳಿಗಳನ್ನು ಗುಳುಂ ಮಾಡುತ್ತಿದ್ದ ನಾಗರಹಾವು ಸೆರೆ

ಸ್ಥಳಕ್ಕೆ ಬಂದ ವಿಜಯ್​, ಸುಮಾರು ಒಂದೂವರೆ ಕಾಲ ಕಾರ್ಯಾಚರಣೆ ನಡೆಸಿ ನಾಗರಹಾವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಕಪ್ಪತಗುಡ್ಡದಲ್ಲಿ ಬಿಟ್ಟಿದ್ದಾರೆ. ಇಷ್ಟುದಿನ ಹಾವಿನ ಭಯದಲ್ಲಿದ್ದ ಕೋಳಿ ಮತ್ತು ಕೋಳಿ ಮರಿಗಳು ಸಧ್ಯ ಭಯಮುಕ್ತವಾಗಿವೆ. ಮನೆಯ ಮಾಲೀಕರು ಸಹ ನಿಟ್ಟುಸಿರು ಬಿಟ್ಟಿದ್ದಾರೆ.

ABOUT THE AUTHOR

...view details