ಕರ್ನಾಟಕ

karnataka

ETV Bharat / state

ಸಚಿವ ಸಿ.ಸಿ ಪಾಟೀಲ್​​ ಮನೆಯಲ್ಲಿ ನಾಗರಹಾವು ಪ್ರತ್ಯಕ್ಷ! - snake at gadag houses

ಹೋಮ್‌ಗಾರ್ಡ್ ಸಿಬ್ಬಂದಿ ಬುಡ್ಡಾ ಸುರೇಬಾನ ಅವರು ಸೋಮವಾರ ಒಂದೇ ದಿನ ವಿವಿಧ ಜಾತಿಯ ಮೂರು ಹಾವುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ..

snake at minister cc patil home
ಸಿ ಸಿ ಪಾಟೀಲ್​​ ಮನೆಯಲ್ಲಿ ನಾಗರಹಾವು

By

Published : Mar 22, 2022, 7:31 AM IST

ಗದಗ: ರಾಜ್ಯ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರ ನರಗುಂದದ ಮನೆಯ ಕಂಪೌಂಡ್ ಬಳಿ ಸೋಮವಾರ ಹಾವು ಪ್ರತ್ಯಕ್ಷವಾಗಿದ್ದು, ಗೃಹ ರಕ್ಷಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

ಒಂದೇ ದಿನ ವಿವಿಧ ಜಾತಿಯ ಮೂರು ಹಾವುಗಳನ್ನು ರಕ್ಷಿಸಿದ ಗೃಹ ರಕ್ಷಕ ದಳದ ಸಿಬ್ಬಂದಿ

ನರಗುಂದ ಪಟ್ಟಣದಲ್ಲಿರುವ ಸಚಿವರ ಮನೆಯ ಕಂಪೌಂಡ್‌ನಲ್ಲಿ ಕಂಡ 4 ಅಡಿ ಉದ್ದದ ನಾಗರ ಹಾವನ್ನು ಹೋಮ್‌ಗಾರ್ಡ್ ಸಿಬ್ಬಂದಿ ಬುಡ್ಡಾ ಸುರೇಬಾನ ಅವರು ಸೆರೆ ಹಿಡಿದು, ಸುರಕ್ಷಿತ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ.

ಇದನ್ನೂ ಓದಿ:ಮಂಗಳಾದೇವಿ ರಸ್ತೆಗೆ ತುಳು ಲಿಪಿಯ ನಾಮಫಲಕ: ಮನವಿ ಕೊಟ್ಟ ಬಾಲಕಿಯಿಂದ ಉದ್ಘಾಟನೆ

ಇನ್ನೂ ಬುಡ್ಡಾ ಸುರೇಬಾನ ಅವರು ಸೋಮವಾರ ಒಂದೇ ದಿನ ವಿವಿಧ ಜಾತಿಯ ಮೂರು ಹಾವುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದು, ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details