ಕರ್ನಾಟಕ

karnataka

ETV Bharat / state

ಮಂತ್ರಾಕ್ಷತೆ, ಮಾಂಗಲ್ಯಧಾರಣೆ ಇಲ್ಲ: ಸಂವಿಧಾನ ಸಾಕ್ಷಿಯಾಗಿ ಸರಳ ವಿವಾಹವಾದ ಜೋಡಿ

ಯಾವುದೇ ಆಡಂಬರ, ವಿಶೇಷ ಸಂಭ್ರಮ ಇಲ್ಲದೇ ಸಂವಿಧಾನ ಸಾಕ್ಷಿಯಾಗಿ ಇಲ್ಲೊಂದು ಜೋಡಿ ಹೊಸ ಬದುಕಿಗೆ ಅಡಿಯಿಟ್ಟರು.

simply married couple
ಸರಳವಾಗಿ ವಿವಾಹವಾದ ಜೋಡಿ

By

Published : Jan 5, 2023, 10:24 AM IST

Updated : Jan 5, 2023, 3:13 PM IST

ಸಂವಿಧಾನ ಸಾಕ್ಷಿಯಾಗಿ ಸರಳ ವಿವಾಹವಾದ ಜೋಡಿ

ಗದಗ :ವೈದಿಕ ವಿಧಿ, ವಿಧಾನಗಳಿಲ್ಲ. ಮಾಂಗಲ್ಯಧಾರಣೆಯೂ ಇಲ್ಲ. ಇವರಿಗೆ ಸಂವಿಧಾನವೇ ಸಾಕ್ಷಿ. ಹೀಗೆ ನವಜೋಡಿಯೊಂದು ಗದಗ ನಗರದಲ್ಲಿ ಸರಳವಾಗಿ ವಿವಾಹವಾದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಸಭಾ ಭವನದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಕಲಬುರಗಿಯ ಪೂಜಾ ಮತ್ತು ಗದಗದ ಸೋಮಶೇಖರ್ ಬಾಳ ಸಂಗಾತಿಯಾಗಿ ಹೊಸ ಬದುಕಿಗೆ ಮುಂದಡಿ ಇಟ್ಟರು.

ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ ಅವರು ಸಂವಿಧಾನ ಸಾಕ್ಷಿಯಾಗಿ ಪ್ರತಿಜ್ಞೆ ಬೋಧನೆ ಮಾಡಿದರು. ಈ ಮೂಲಕ ನೂತನ ವಧು-ವರ ಪರಸ್ಪರ ಹಾರ ಬದಲಾಯಿಸಿಕೊಂಡರು. ಅತಿಥಿಗಳಿಗೆ ವಚನ ಸಾಹಿತ್ಯದ ಪುಸ್ತಕಗಳನ್ನು ಉಡುಗೊರೆ ನೀಡಲಾಯಿತು. ಬಂಧು-ಬಳಗ, ಸ್ನೇಹಿತರಿದ್ದರು. ಜ್ಯೋತಿ ಬಾ ಪುಲೆ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿ ಅವರ ಸಾಧನೆಗಳನ್ನು ನೆನೆದು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬುದ್ಧ, ಬಸವ, ಅಂಬೇಡ್ಕರ್ ಆದರ್ಶಗಳನ್ನು ಕೊಂಡಾಡಿದರು.

ಇದನ್ನೂ ಓದಿ:ಪವಿತ್ರ ಬಂಧನಕ್ಕೆ ತೆಲುಗು ನಟ ನರೇಶ್ ಸಜ್ಜು.. ವಿಡಿಯೋ ಮೂಲಕ ಶುಭಸುದ್ದಿ ಹಂಚಿಕೊಂಡ ಜೋಡಿ

Last Updated : Jan 5, 2023, 3:13 PM IST

ABOUT THE AUTHOR

...view details