ಗದಗ:ನೆರೆಯ ಕರಾಳ ಛಾಯೆಯ ಮಧ್ಯೆ 73 ನೇ ಸ್ವಾತಂತ್ರ್ಯ ದಿನವನ್ನ ಗದಗದಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು.
ನೆರೆಯಿಂದ ಕಳೆಗುಂದಿದ ಸ್ವತಂತ್ರ ದಿನಾಚರಣೆ... ಆದ್ರೂ ದೇಶ ಭಕ್ತಿ ಬಿಡದ ಈ ಜನ! - ಗದಗ
ನೆರೆಗೆ ತುತ್ತಾಗಿರುವ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ 73 ನೇ ಸ್ವಾತಂತ್ರ್ಯ ದಿನವನ್ನ ಸರಳವಾಗಿ ಆಚರಣೆ ಮಾಡಲಾಗಿದೆ.
ಗದಗದಲ್ಲಿ ಸರಳ ಧ್ವಜಾರೋಹಣ
ಗದಗದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಧ್ವಜಾರೋಹಣ ನೆರವೇರಿಸಿದರು. ನಂತರ ಪೊಲೀಸ್, ಗೃಹರಕ್ಷಕ ಪಡೆ ಸೇರಿದಂತೆ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಧ್ವಜವಂದನೆ ಸ್ವೀಕರಿಸಿದರು.
ಈ ಬಾರಿ ಗದಗ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಪ್ರವಾಹದ ಪರಿಸ್ಥಿತಿ ಇರುವುದರಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗದಗ ಶಾಸಕ ಎಚ್ ಕೆ ಪಾಟೀಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ರು.