ಗದಗ: ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅವರನ್ನು ಕಂಟ್ರೋಲ್ ರಿಮೋಟ್ ಅನ್ನೋಕಾಗಲ್ಲ ಎಂದು ಕಾರ್ಮಿಕ ಇಲಾಖೆ ಹಾಗೂ ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ಬಿ.ಎಲ್.ಸಂತೋಷ್ ಎಲ್ಲದಕ್ಕೂ ಅಡ್ಡಿಯಾಗೋದಿಲ್ಲ: ಸಚಿವ ಶಿವರಾಮ ಹೆಬ್ಬಾರ್
ಬಿ.ಎಲ್.ಸಂತೋಷ್ ಅವರು ಅಗತ್ಯವಾದ ಮಾರ್ಗದರ್ಶನ ನೀಡುತ್ತಾರೆ. ಇದನ್ನು ಕಂಟ್ರೋಲ್ ಎನ್ನಲು ಆಗಲ್ಲ ಎಂದು ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ಗದಗದಲ್ಲಿ ಮಾನಾಡಿದ ಅವರು, ಬಿ.ಎಲ್.ಸಂತೋಷ್ ರಾಷ್ಟ್ರ ನಾಯಕರು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಅವರನ್ನು ಕಂಟ್ರೋಲ್ ರಿಮೋಟ್ ಅನ್ನೋಕಾಗಲ್ಲ. ಯಾಕೇಂದ್ರೆ ಒಂದು ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷ ಜೊತೆಯಾಗಿ ಹೋಗಬೇಕಾಗುತ್ತೆ. ಎಲ್ಲರೂ ಜೊತೆ ಜೊತೆಯಾಗಿದ್ದರೆ ಮಾತ್ರ ಮುಂದಿನ ಚುನಾವಣೆ ಎದುರಿಸಬಹುದು. ಪಕ್ಷ ಗಟ್ಟಿ ಮಾಡಿದಾಗ ಸರ್ಕಾರ ಮತ್ತಷ್ಟು ಅಧಿಕಾರ ನಡೆಸುತ್ತೆ. ಈ ನಿಟ್ಟಿನಲ್ಲಿ ಸಂತೋಷ್ ಅವರು ಮಾರ್ಗದರ್ಶನ ನೀಡುತ್ತಾರೆ. ಇದು ಕಂಟ್ರೋಲ್ ಅಲ್ಲ ಎಂದರು.
ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹಾಗೂ ಸೆಲೆಬ್ರಿಟಿಗಳು ಪಕ್ಷ ಸೇರ್ಪಡೆಗೊಳ್ಳುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಇನ್ನು ಮುಂದೆ ದೇಶದಲ್ಲಿ ಪರ್ಯಾಯ ಪಕ್ಷಕ್ಕೆ ಉಳಿಗಾಲವಿಲ್ಲ. ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಗಟ್ಟಿಯಾದ ಹೆಜ್ಜೆಯನ್ನಿಟ್ಟಿದೆ. ಅದೇ ರೀತಿ ಕರ್ನಾಟಕ ರಾಜ್ಯದಲ್ಲಿ ಯಡಿಯೂರಪ್ಪ ನಾಯಕತ್ವದಲ್ಲಿ ಮಹತ್ವದ ಹೆಜ್ಜೆನ್ನಿಟ್ಟಿದೆ. ಹೀಗಾಗಿ ಎಲ್ಲರೂ ಪಕ್ಷ ಸೇರುತ್ತಿದ್ದಾರೆ ಎಂದರು. ನಂತರ ಪಕ್ಷದ ಕಚೇರಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು.