ಗದಗ:ಕೋಡಿಮಠದಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಎರಡು ತಿಂಗಳ ಹಿಂದೆ ಹೇಳಿದ್ದ ಭವಿಷ್ಯವಾಣಿ ಸದ್ಯ ಆಗುತ್ತಿರುವ ವಿಪರೀತ ಮಳೆ ಹಾಗೂ ಜಲಪ್ರಳಯಗಳೆರೆಡನ್ನೂ ತಾಳೆ ಮಾಡುವಂತೆ ಮಾಡಿದೆ.
ಸ್ವಾಮೀಜಿಗಳ ಭವಿಷ್ಯ ಹೇಗಿತ್ತು ಅಂದರೆ, ಈ ರಕ್ಕಸ ಮಳೆ ಹಾಗೂ ಪ್ರವಾಹದ ರೌದ್ರ ನರ್ತನ ಇದೆಲ್ಲ ಇಷ್ಟಕ್ಕೆ ನಿಲ್ಲೋದಿಲ್ಲ. ಇನ್ನೂ ಸಹ ಮುಂದುವರಿಯಲಿದೆ ಅನ್ನೋ ಮುನ್ಸೂಚನೆ ಮೂಲಕ ತಮ್ಮ ಭವಿಷ್ಯವಾಣಿ ನೀಡಿ ಹೋಗಿದ್ದರು. ಕಳೆದ ಎರೆಡು ದಿನಗಳಿಂದ ವರುಣದೇವ ಆರ್ಭಟಿಸುತ್ತಿದ್ದಾನೆ. ಅದರಲ್ಲೂ ಸ್ವಾಮೀಜಿ ಹೇಳಿದ ಪ್ರಕಾರ ಮಹರಾಷ್ಟ್ರ, ಕೊಡಗು ಮತ್ತು ಉತ್ತರ ಕರ್ನಾಟಕದಲ್ಲಿ ಪ್ರವಾಹ ಆಗುತ್ತೇ ಎಂದು ಹೇಳಿದ್ದರು. ಇದೀಗ ಅವರ ವಾಣಿಯಂತೆಯೇ ಎಲ್ಲವೂ ಆಗುತ್ತಿದೆ.
ಸ್ವಾಮಿಜಿ ಹೇಳಿದ್ದ ಭವಿಷ್ಯ ನಿಜವಾಯ್ತಾ?
ಇಷ್ಟಕ್ಕೆ ಸುಮ್ಮನಿರದ ಸ್ವಾಮೀಜಿ "ಈಗಾಗಿರೋ ಅನಾಹುತ ಶ್ರಾವಣ ಮುಗಿಯುವವರೆಗೂ ಮುಂದುವರೆಯುತ್ತದೆ. ಕಾರ್ತಿಕ ಮಾಸದಲ್ಲಿ ಆಗಾಗ ಈ ಪ್ರವಾಹ ಬಂದು ಹೋಗುತ್ತದೆ ಅಂತ ಎಚ್ಚರಿಕೆಯ ಜೊತೆಗೆ ಅಚ್ಚರಿ ಸಂಗತಿಯನ್ನು ಸಹ ತಿಳಿಸಿ ಹೋಗಿದ್ದರು. ಅಲ್ಲದೇ ಸ್ವಾಮೀಜಿ ರಾಜ್ಯಕ್ಕಾಗೋ ಮುಂದಿನ ಗಂಡಾಂತರ ಬಗ್ಗೆಯೂ ಹೇಳಿ ಹೋಗಿದ್ದರು. ಅದೇನೆಂದರೆ ಇಷ್ಟಕ್ಕೆ ಈ ಅವಾಂತರಗಳು ನಿಲ್ಲುವುದಿಲ್ಲ. ಮುಂದೆ ಭೂ-ಆಘಾತ, ವಾಯು ಆಘಾತಗಳೂ ಕಾದಿವೆ. ದೊಡ್ಡ ದೊಡ್ಡ ನಗರಗಳಲ್ಲಿ ಕಟ್ಟಡಗಳು ಧರೆಗುರುಳುತ್ತವೆ. ಜಗತ್ತೆ ಕಂಡರಿಯದ ಆಘಾತ ಆಗುವ ಲಕ್ಷಣಗಳಿವೆ. ಆದರೆ, ಇದನ್ನು ಈಗ ಹೇಳುವುದಿಲ್ಲ ಮುಂದೆ ಸಮಯ ಬಂದಾಗ ಹೇಳುತ್ತೇನೆ ಅಂತ ಭವಿಷ್ಯ ನುಡಿಯೋ ಮೂಲಕ ಕರಾಳ ಸತ್ಯವನ್ನ ಬಿಚ್ಚಿಟ್ಟಿದ್ದರು.
ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ತಾಳೆಗರಿಯ ಮೂಲಕ ಭವಿಷ್ಯ ನುಡಿಯುವಲ್ಲೇ ದೇಶಾದ್ಯಂತ ಹೆಸರುವಾಸಿಯಾಗಿರುವ ಕೋಡಿಮಠ ಶ್ರೀಗಳು ಇಂದಿಗೂ ಸಹ ಕಾಲಜ್ಞಾನದ ವಿಶಿಷ್ಟ ಪರಂಪರೆಯನ್ನು ಮುಂದುವರೆಸುತ್ತಾ ಬಂದಿದೆ. ಹಾಗಾಗಿ ಶ್ರೀಗಳು ಹೇಳಿದ್ದ ಅದೆಷ್ಟೋ ಭವಿಷ್ಯಗಳು ನಿಜವಾಗಿದ್ದೆ ಹೆಚ್ಚು ಎಂಬುದು ಭಕ್ತರ ನಂಬಿಕೆಯಾಗಿದೆ.