ಕರ್ನಾಟಕ

karnataka

ETV Bharat / state

ಪೌರತ್ವ ತಿದ್ದುಪಡಿ ಕಾಯ್ದೆಗೆ ಕಾನೂನು ಬಲ್ಲವರ ವಿರೋಧ ಸಲ್ಲದು: ಶಿವಕುಮಾರ್​ ಉದಾಸಿ

ಪೌರತ್ವ ಕಾಯ್ದೆಯ ಕುರಿತು ದಾರಿಯಲ್ಲಿ ಹೋಗುವವರು ಈ ಮಾತು ಹೇಳಿದ್ರೆ ತೊಂದರೆ ಇಲ್ಲ. ಕಾನೂನು ಮಾಡುವವರೆ ಹೇಳಿದ್ರೇ ಹೇಗೆ ಎಂದು ಶಿವಕುಮಾರ್​ ಉದಾಸಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

Shivakumar udasi
ಶಿವಕುಮಾರ್​ ಉದಾಸಿ

By

Published : Jan 13, 2020, 8:19 PM IST

ಗದಗ:ಪೌರತ್ವ ಕಾಯ್ದೆಯ ಕುರಿತು ದಾಖಲೆ ನಂದಿಲ್ಲ, ಇನ್ನೊಬ್ಬರದಿಲ್ಲ ಎಂದು ಕಾನೂನು ತಿಳಿದವರೆ ಹೇಳಿದರೆ ಹೇಗೆ ಎಂದು ಸಂಸದ ಶಿವಕುಮಾರ್​ ಉದಾಸಿ ಹೇಳಿದರು.

ಸಂಸದ ಶಿವಕುಮಾರ್​ ಉದಾಸಿ

ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದ ಅವರು, ದಾರಿಯಲ್ಲಿ ಹೋಗುವವರು ಈ ಮಾತು ಹೇಳಿದ್ರೆ ತೊಂದರೆ ಇಲ್ಲ. ಕಾನೂನು ಮಾಡುವವರೆ ಹೇಳಿದ್ರೇ ಹೇಗೆ ಎಂದು ಪ್ರಶ್ನಿಸಿದರು.

ಪೌರತ್ವ ಕಾಯ್ದೆಯಿಂದ ಅಲ್ಪ ಸಂಖ್ಯಾತರಿಗೆ ತೊಂದರೆ ಆಗುವುದಿಲ್ಲ. ಇನ್ನು ಈ ಕಾಯ್ದೆ ಕುರಿತು ರೂಲ್ಸ್ ಪ್ರೇಮ್ ಕೂಡ ಆಗಿಲ್ಲ. ಈ ರೀತಿ ಏನು ಗೊತ್ತಿಲ್ಲದೆ ಮಾತನಾಡೋದ್ರಲ್ಲಿ ದುರುದ್ದೇಶ ಇದೆ ಎನ್ನುವದು ಗೊತ್ತಾಗುತ್ತೇ ಎಂದರು.

ABOUT THE AUTHOR

...view details