ಕರ್ನಾಟಕ

karnataka

ETV Bharat / state

ಶೀಘ್ರದಲ್ಲೇ ಫಲಾನುಭವಿಗಳಿಗೆ ತಲುಪಲಿವೆ ಆಶ್ರಯ ಮನೆ: ಎಚ್​.ಕೆ.ಪಾಟೀಲ್​​ ಭರವಸೆ - ಕೇಂದ್ರ ಮತ್ತು ರಾಜ್ಯ ಸರ್ಕಾರ

ಗದಗ-ಬೆಟಗೇರಿ ಅವಳಿ‌ ನಗರದಲ್ಲಿ 5,123 ಕುಟುಂಬ ಗುಡಿಸಲು, ಶೆಡ್​​ಗಳಲ್ಲಿ, ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಅವರಿಗೆಲ್ಲರಿಗೂ ಸೂರು ಕಲ್ಪಿಸುವ ಉದ್ದೇಶದಿಂದ ಪ್ರತ್ಯೇಕ ಸುಸಜ್ಜಿತ ಮನೆಗಳನ್ನು ನಿರ್ಮಿಸುತ್ತಿದ್ದು, ಮೂರು ತಿಂಗಳಲ್ಲಿ ಫಲಾನುಭವಿಗಳ ಕೈ ಸೇರಲಿವೆ ಎಂದು ಶಾಸಕ ಎಚ್​ಕೆ ಪಾಟೀಲ್​ ತಿಳಿಸಿದರು

Shelters for the poor people's very soon

By

Published : Jul 30, 2019, 11:29 PM IST

ಗದಗ:ಗದಗ-ಬೆಟಗೇರಿ ಅವಳಿ‌ ನಗರದಲ್ಲಿ 5,123 ಕುಟುಂಬ ಗುಡಿಸಲು, ಶೆಡ್​​, ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದು, ಸೂರಿಲ್ಲದ ಫಲಾನುಭವಿಗಳಿಗೆ ಆದಷ್ಟು ಬೇಗ ಆಶ್ರಯ ಮನೆ ಕಲ್ಪಿಸಲಾಗುವುದು ಎಂದು ಶಾಸಕ ಎಚ್​ಕೆ ಪಾಟೀಲ್​ ಭರವಸೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್​.ಕೆ.ಪಾಟೀಲ್​

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರ, ಸ್ಥಳೀಯ ಶಾಸಕರ ನಿಧಿ‌ಯಿಂದ ಈ ಮನೆಗಳ ನಿರ್ಮಾಣ ಮಾಡಲಾಗುತ್ತಿದ್ದು, ಒಟ್ಟು 3,600 ಮನೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಮೂರು ತಿಂಗಳಲ್ಲಿ 500 ಮನೆಗಳನ್ನು ಮೊದಲ ಹಂತದಲ್ಲಿ ವಿತರಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ABOUT THE AUTHOR

...view details