ಕರ್ನಾಟಕ

karnataka

ETV Bharat / state

ಕುರಿಗಳ್ಳರನ್ನು ಹಿಡಿಯೋಕೆ ಈ ಗ್ರಾಮಸ್ಥರು ಮಾಡಿದ ಪ್ಲಾನ್​ ಏನ್​ ಗೊತ್ತಾ?

ಕುರಿಗಳನ್ನು ಕದ್ದು ಹೊರರಾಜ್ಯಗಳಿಗೆ ಮಾರಾಟ ಮಾಡ್ತಿದ್ದ ಕುರಿಗಳ್ಳರ ಗ್ಯಾಂಗ್​ವೊಂದನ್ನು ರೆಡ್​​ ಹ್ಯಾಂಡ್​​ ಆಗಿ ಹಿಡಿದು ಅಸುಂಡಿ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.

ships-thieves-found-in-gadag
ಕುರಿಗಳ್ಳರನ್ನು ಹಿಡಿದ ಗ್ರಾಮಸ್ಥರು

By

Published : May 16, 2020, 6:58 PM IST

Updated : May 16, 2020, 7:13 PM IST

ಗದಗ:ಕುರಿಗಳನ್ನು ಕದ್ದು ಹೊರರಾಜ್ಯಗಳಿಗೆ ಮಾರಾಟ ಮಾಡ್ತಿದ್ದ ಖದೀಮರಿಗೆ ಗ್ರಾಮಸ್ಥರೇ ಸೇರಿ ಸಖತ್ ಗೂಸಾ ನೀಡಿರುವ ಘಟನೆ ಜಿಲ್ಲೆಯ ಅಸುಂಡಿ ಗ್ರಾಮದಲ್ಲಿ ನಡೆದಿದೆ.‌

ಅಸುಂಡಿ ಗ್ರಾಮದಲ್ಲಿ ಬಹಳಷ್ಟು ಕುರಿ ಮೇಕೆಗಳು ರಾತ್ರೋರಾತ್ರಿ ಮಾಯವಾಗ್ತಿದ್ವು. ಇದರಿಂದ ಬೇಸತ್ತಿದ್ದ ಗ್ರಾಮಸ್ಥರು ಕಳ್ಳರನ್ನ ರೆಡ್ ಹ್ಯಾಂಡ್ ಆಗಿ ಹಿಡಿಯುವ ಪ್ಲಾನ್ ಮಾಡಿದ್ರು. ಕುರಿಗಳ ಕಳ್ಳತನಕ್ಕೆಂದು ಬಂದಿದ್ದ ನಾಲ್ಕು ಜನ ಯುವಕರ ಚಲನವಲನ ಗಮನಿಸಿದ ಗ್ರಾಮದ ಯುವಕರು ಅವರನ್ನ ರೆಡ್ ಹ್ಯಾಂಡ್ ಆಗಿ ಹಿಡಿಯಲು ಸಜ್ಜಾದ್ರು. ಕುರಿಯನ್ನ ಕದಿಯುವವರೆಗೆ ಇವರನ್ನ ಗಮನಿಸಲು ಯುವಕರು ಮರವೇರಿ ಕುಳಿತಿದ್ದರು.

ಕುರಿಗಳ್ಳರನ್ನು ಹಿಡಿದು ಥಳಿಸಿದ ಜನ

ಊರ ಹೊರಗಿನ ಕುರಿಯನ್ನ ಕದ್ದು ಹೊತ್ತೊಯ್ಯುವಷ್ಟರಲ್ಲಿ ಇಬ್ಬರು ಖದೀಂರು ಸಿಕ್ಕಿಬಿದ್ದಿದ್ದಾರೆ. ಉಳಿದವರು ಓಡಿಹೋಗಿದ್ದರು. ಸಿಕ್ಕಿಬಿದ್ದ ಇಬ್ಬರಿಗೆ ಸಖತ್ ಗೂಸಾ ನೀಡಿದ್ದಾರೆ. ಥಳಿಸಿದಾಗ ಕುರಿ ಕದ್ದು ಮಾರುವುದರ ಬಗ್ಗೆ ಎಲ್ಲಾ‌ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಈ ಖದೀಮರು ಗದಗನ ಸೆಟಲ್ಮೆಂಟ್ ನಿವಾಸಿಗಳು ಎಂದು ತಿಳಿದು ಬಂದಿದೆ. ಈ ಕೃತ್ಯಕ್ಕೆ ಅಣ್ಣಿಗೇರಿಯ ಕುರಿಕಾಯುವ ಓರ್ವ ಬಾಲಕನನ್ನು ಬಳಸಿಕೊಂಡಿದ್ದಾರೆ.

ಆರೋಪಿಗಳಾ ವಿಕಾಸ್​, ಅಪ್ರಾಪ್ತ ಬಾಲಕ ಸೇರಿದಂತೆ ಒಟ್ಟು ನಾಲ್ಕು ಜನ ಕಳ್ಳರ ಗ್ಯಾಂಗ್​ನವರು ಅನೇಕ ದಿನಗಳಿಂದ‌ ಅಸುಂಡಿ, ಮಲ್ಲಸಮುದ್ರ, ಬಿಂಕದಕಟ್ಟಿ, ಕುರ್ತಕೋಟಿ ಹೀಗೆ ಅನೇಕ ಕಡೆಗಳಲ್ಲಿ ಕುರಿಗಳನ್ನು ಕಳ್ಳತನ ಮಾಡುತ್ತಿದ್ದರು. ಕಳ್ಳತನ ಮಾಡಿದ ಕುರಿಗಳನ್ನು ಗದಗನಿಂದ ಹೊರರಾಜ್ಯದ ಕೊಲ್ಲಾಪುರ ಹಾಗೂ ಸೊಲ್ಲಾಪುರಕ್ಕೆ ಮಾರಾಟ ಮಾಡುತ್ತಿದ್ದದ್ದಾಗಿ ಬಾಯ್ಬಿಟ್ಟಿದ್ದಾರೆ. ಗೂಸಾ ಕೊಟ್ಟ ಬಳಿಕ ನಾಲ್ಕು ಜನರನ್ನ ಗದಗ ಗ್ರಾಮೀಣ ಠಾಣೆ ಪೊಲೀಸರಿಗೆ ಒಪ್ಪಿಸಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

Last Updated : May 16, 2020, 7:13 PM IST

ABOUT THE AUTHOR

...view details