ಕರ್ನಾಟಕ

karnataka

ETV Bharat / state

ಇದು ಯಾರದ್ದೋ ಜಮೀನಲ್ಲ, ಗದಗದಲ್ಲಿರುವ ಸರ್ಕಾರಿ ಶಾಲೆಯ ಆಟದ ಮೈದಾನ! - ಕೃಷಿ

ಎಸ್​ಡಿಎಮ್​ಸಿ ಅಧ್ಯಕ್ಷ ಅಶೋಕ ಹೊಸಮನಿ ಬಿ.ಎಸ್.ಮೇಲೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (B S Meleri Village Government School) ಸುಮಾರು‌ ಒಂದೂವರೆ ಎಕರೆ ಪ್ರದೇಶದ ಆಟದ ಮೈದಾನದಲ್ಲಿ ಗೋವಿನಜೋಳ ಬೆಳೆದಿದ್ದಾನೆ. ಹಾಗಾಗಿ ಇಲ್ಲಿ ಶಾಲೆಗೆ ಮೈದಾನ ಇದ್ದರೂ ಕೂಡಾ ಮಕ್ಕಳಿಗೆ ಆಟವಾಡುವ ಭಾಗ್ಯ ಇಲ್ಲದಂತಾಗಿದೆ.

agriculture in school field
ಸರ್ಕಾರಿ ಶಾಲೆಯ ಆಟದ ಮೈದಾನದಲ್ಲಿ ಕೃಷಿ

By

Published : Nov 14, 2021, 10:58 AM IST

Updated : Nov 14, 2021, 11:32 AM IST

ಗದಗ: ಶಾಲಾಭಿವೃದ್ಧಿಯ ದೃಷ್ಟಿಯಿಂದ ಎಸ್​ಡಿಎಮ್​​ಸಿ ಅಧ್ಯಕ್ಷರನ್ನು ನೇಮಕ ಮಾಡಲಾಗಿರುತ್ತದೆ. ಆದರೆ ಗದಗ (Gadag) ಜಿಲ್ಲೆಯ ರೋಣ (Rona) ತಾಲೂಕಿನ ಬಿ.ಎಸ್.ಮೇಲೇರಿ ಗ್ರಾಮದಲ್ಲಿ (B S Meleri Village) ಎಸ್​​ಡಿಎಮ್​ಸಿ ಅಧ್ಯಕ್ಷ ಶಾಲೆಯ ಅಭಿವೃದ್ಧಿ ಮಾಡದೇ ಶಾಲೆಯ ಮೈದಾನವನ್ನೇ ಕಬಳಿಸಿದ್ದಾನೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಈತ ಮಕ್ಕಳು ಆಟವಾಡುವ ಮೈದಾನದಲ್ಲಿ ಬೆಳೆ ಬೆಳೆದಿದ್ದಾನೆ.

ಸರ್ಕಾರಿ ಶಾಲೆಯ ಆಟದ ಮೈದಾನದಲ್ಲಿ ಕೃಷಿ - ಪ್ರತಿಕ್ರಿಯೆ

ಎಸ್​ಡಿಎಮ್​ಸಿ ಅಧ್ಯಕ್ಷ ಅಶೋಕ ಹೊಸಮನಿ (SDMC President Ashok Hosmani) ಬಿ.ಎಸ್.ಮೇಲೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು‌ ಒಂದೂವರೆ ಎಕರೆ ಪ್ರದೇಶದ ಆಟದ ಮೈದಾನದಲ್ಲಿ ಗೋವಿನಜೋಳ ಬೆಳೆದಿದ್ದಾನೆ. ಶಾಲೆಯ ಶಿಕ್ಷಕರನ್ನು ಬುಟ್ಟಿಗೆ ಹಾಕಿಕೊಂಡು, ಎಸ್‌ಡಿಎಮ್‌ಸಿ ಸಭೆಯಲ್ಲಿ ಠರಾವು ಪಾಸ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪೋಷಕರ ಆಗ್ರಹವೇನು?:

ಶಾಲೆಯ ಮೈದಾನದಲ್ಲಿ ಗೋವಿನ ಜೋಳ ಬೆಳೆದ ವಿಚಾರವನ್ನು ಮಕ್ಕಳು ಪೋಷಕರಿಗೆ ತಿಳಿಸಿದ್ದಾರೆ. ಪೋಷಕರು ಹೂ, ಮರ, ಗಿಡಗಳನ್ನು ಬೆಳೆಸಬೇಕು. ಅದನ್ನು ಬಿಟ್ಟು ಹೀಗೆ ವ್ಯವಸಾಯ ಮಾಡಿದ್ರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಆದರೂ ಕೂಡಾ ಎಸ್​ಡಿಎಮ್​ಸಿ ಅಧ್ಯಕ್ಷ ಮಾತ್ರ ಕೇರ್ ಮಾಡುತ್ತಿಲ್ಲ. ಹಾಗಾಗಿ ಮಕ್ಕಳಿಗೆ ಮೈದಾನವನ್ನು ಬಿಟ್ಟು ಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಶಾಲೆಗೆ ಮೈದಾನವಿದ್ದರೂ ಕೂಡಾ ಮಕ್ಕಳಿಗೆ ಆಟವಾಡುವ ಭಾಗ್ಯ ಇಲ್ಲದಂತಾಗಿದೆ. ಮಕ್ಕಳು ಪಾಠ ಕೇಳಿಕೊಂಡು ಆಟವಾಡದೇ ಮನೆಗೆ ಹೋಗಬೇಕು. ಒಂದು ವೇಳೆ, ಮಕ್ಕಳು ಆ ಗೋವಿನಜೋಳ ಬೆಳೆದ ಪ್ರದೇಶಕ್ಕೆ ಹೋದ್ರೆ ಎಸ್‌ಡಿಎಮ್‌ಸಿ ಅಧ್ಯಕ್ಷ ಬೆಳೆ ಹಾಳಾಗುತ್ತೆ ಎಂದು ದಬ್ಬಾಳಿಕೆ ಮಾಡುತ್ತಾನೆ ಎನ್ನುವ ಆರೋಪವಿದೆ.

ಈ ಕುರಿತು ಶಾಲೆಯ ಮುಖ್ಯೋಪಾಧ್ಯಾಯ ಸಂಗಪ್ಪ ಹುನಗುಂಡಿ ಪ್ರತಿಕ್ರಿಯಿಸಿ, ಈ ಹಿಂದೆ ಗ್ರಾಮದ ಕೆಲವು ರೈತರು ಗೋವಿನಜೋಳ ರಾಶಿ ಮಾಡಿದರು. ಹಾಗಾಗಿ ಆ ಮೈದಾನವನ್ನು ಸ್ವಚ್ಛ ಮಾಡಿಕೊಂಡು ಅಧ್ಯಕ್ಷರು ಗೋವಿನಜೋಳ ಬೆಳೆದಿದ್ದಾರೆ. ಗೋವಿನಜೋಳವನ್ನು ತೆರವು ಮಾಡಿಸುತ್ತೇನೆ ಎಂದರು.

ಇದನ್ನೂ ಓದಿ:World Diabetes Day: ಡಯಾಬಿಟೀಸ್​ನಿಂದ ನಿತ್ಯ ಸಾವಿನ ಸಂಖ್ಯೆ ಎಷ್ಟು ಗೊತ್ತಾ?

Last Updated : Nov 14, 2021, 11:32 AM IST

ABOUT THE AUTHOR

...view details