ಗದಗ:ನಗರದ ಹೃದಯಭಾಗದಲ್ಲಿರುವ ಹಳೆ ಬಸ್ ನಿಲ್ದಾಣಕ್ಕೆ ಪಂಡಿತ್ ಪುಟ್ಟರಾಜ ಗವಾಯಿಗಳವರು ಹೆಸರು ನಾಮಕರಣ ಮಾಡಬೇಕೆಂದು ಸಮತಾ ಸೇನಾ ಸಂಘಟನೆ ಒತ್ತಾಯಿಸಿದೆ.
ಹಳೆ ಬಸ್ ನಿಲ್ದಾಣಕ್ಕೆ ಡಾ.ಪಂಡಿತ್ ಪುಟ್ಟರಾಜ ಗವಾಯಿಗಳ ಹೆಸರು ನಾಮಕರಣಕ್ಕೆ ಒತ್ತಾಯ - Gadaga bus stand name issue
ಗದಗದಲ್ಲಿರುವ ಹಳೇ ಬಸ್ ನಿಲ್ದಾಣಕ್ಕೆ ಪಂಡಿತ್ ಪುಟ್ಟರಾಜ ಗವಾಯಿಗಳವರು ಹೆಸರು ನಾಮಕರಣ ಮಾಡಬೇಕೆಂದು ಸಮತಾ ಸೇನಾ ಸಂಘಟನೆ ಒತ್ತಾಯಿಸಿದೆ.
ಬಸ್ ನಿಲ್ದಾಣಕ್ಕೆ ಡಾಕ್ಟರ್ ಪಂಡಿತ್ ಪುಟ್ಟರಾಜ ಗವಾಯಿಗಳವರ ಹೆಸರಿಡುವಂತೆ ಮೂರು ವರ್ಷಗಳಿಂದ ಕ್ರಾಂತಿ ಸೇನಾ ಸ್ನೇಹ ಬಳಗ ಹಾಗೂ ಇನ್ನೂ ಅನೇಕ ಸಂಘ ಸಂಘಟನೆಗಳು ಹೋರಾಟ ಮಾಡುತ್ತಿವೆ. ಆದರೆ ಜಿಲ್ಲಾಡಳಿತ ಇದುವರೆಗೂ ನಾಮಕರಣಕ್ಕೆ ಮುಂದಾಗಿಲ್ಲ ಎಂದು ಬೇಸರು ವ್ಯಕ್ತಪಡಿಸಿದರು.
ಇನ್ನು ಬಸ್ ನಿಲ್ದಾಣ ದುರಸ್ತಿ ಕಾರ್ಯ ಪೂರ್ಣಗೊಂಡು ಐದು ತಿಂಗಳು ಕಾಲ ಕಳೆದಿವೆ. ಆದರೂ ಸಹ ಉದ್ಘಾಟನೆ ಮಾಡಿಲ್ಲ. ಆದಷ್ಟು ಬೇಗ ಬಸ್ ನಿಲ್ದಾಣಕ್ಕೆ ಡಾಕ್ಟರ್ ಪಂಡಿತ್ ಪುಟ್ಟರಾಜ ಗವಾಯಿಗಳ ನಾಮಕರಣ ಮಾಡಿ ಬಸ್ ನಿಲ್ದಾಣ ಪ್ರಾರಂಭ ಮಾಡಬೇಕೆಂದು ಮನವಿ ಸಂಘಟಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.