ಗದಗ :ಚಲಿಸುತ್ತಿರುವ ಸರ್ಕಾರಿ ಬಸ್ನ ಟೈರ್ ಬ್ಲಾಸ್ಟ್ ಆದ ಪರಿಣಾಮ ಬಸ್ ರಸ್ತೆ ಪಕ್ಕದ ಕಂದಕಕ್ಕೆ ಉರುಳಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಗದಗ ತಾಲೂಕಿನ ಹಿರೇಕೋಪ್ಪ ಗ್ರಾಮದ ಬಳಿ ನಡೆದಿದೆ.
ಟೈರ್ ಬ್ಲಾಸ್ಟ್ ಆಗಿ ಕಂದಕಕ್ಕೆ ಉರುಳಿದ ಬಸ್... ಹಲವರಿಗೆ ಗಾಯ, ತಪ್ಪಿದ ದುರಂತ! - ಚಲಿಸುತ್ತಿದ್ದ ಬಸ್ ಟೈರ್ ಬ್ಲಾಸ್ಟ್,
ಚಲಿಸುತ್ತಿರುವ ಸರ್ಕಾರಿ ಬಸ್ನ ಮುಂಭಾಗ ಟೈರ್ ಬ್ಲಾಸ್ಟ್ ಆಗಿ ಸುಮಾರು 10 ಜನಗ ಗಾಯಗೊಂಡಿರುವ ಘಟನೆ ಹೀರೇಕೊಪ್ಪದಲ್ಲಿ ನಡೆದಿದೆ.
ಚಲಿಸುತ್ತಿರುವ ಸರ್ಕಾರಿ ಬಸ್ಸಿನ ಟೈರ್ ಬ್ಲಾಸ್ಟ್
ಗದಗನಿಂದ ಹುಯಿಲಗೋಳ ಮಾರ್ಗವಾಗಿ ಅರಹುಣಸಿ ಗ್ರಾಮಕ್ಕೆ ಹೊರಟಿದ್ದ ಸರ್ಕಾರಿ ಬಸ್, ಏಕಾಏಕಿ ಬಸ್ನ ಮುಂಭಾಗದ ಟೈರ್ ಬಸ್ಟ್ ಆಗಿದೆ. ಪರಿಣಾಮ ಬಸ್ನಲ್ಲಿದ್ದ ಸುಮಾರು 23 ಜನ ಪ್ರಯಾಣಿಕರ ಪೈಕಿ 10 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ದುರಂತವೊಂದು ತಪ್ಪಿದೆ. ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಗದಗನ ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.