ಗದಗ :ಗದಗನಲ್ಲಿ ಟೋಲ್ ಗೇಟ್ ಸಿಬ್ಬಂದಿ ಮತ್ತು ಯುವಕರ ನಡುವೆ ಮಾರಾಮಾರಿ ನಡೆದಿದೆ.
ಟೋಲ್ ಗೇಟ್ ಸಿಬ್ಬಂದಿ - ಯುವಕರ ನಡುವೆ ಗಲಾಟೆ: ಪ್ರಕರಣ ದಾಖಲು - ಗದಗ ಯುವಕರ ನಡುವೆ ಗಲಾಟೆ ಸುದ್ದಿ
ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿಯ ಟೋಲ್ ಗೇಟ್ ನಲ್ಲಿ ಘಟನೆ ನಡೆದಿದೆ. ಕೊರ್ಲಹಳ್ಳಿ ಗ್ರಾಮದ ಯುವಕರು ಹಣ ನೀಡದಿರುವ ವಿಚಾರಕ್ಕೆ ಗಲಾಟೆಯಾಗಿದೆ.
![ಟೋಲ್ ಗೇಟ್ ಸಿಬ್ಬಂದಿ - ಯುವಕರ ನಡುವೆ ಗಲಾಟೆ: ಪ್ರಕರಣ ದಾಖಲು ಟೋಲ್ ಗೇಟ್ ಸಿಬ್ಬಂದಿ ಮತ್ತು ಯುವಕರ ನಡುವೆ ಗಲಾಟೆ](https://etvbharatimages.akamaized.net/etvbharat/prod-images/768-512-7827746-707-7827746-1593500024103.jpg)
ಟೋಲ್ ಗೇಟ್ ಸಿಬ್ಬಂದಿ ಮತ್ತು ಯುವಕರ ನಡುವೆ ಗಲಾಟೆ
ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿಯ ಟೋಲ್ಗೇಟ್ನಲ್ಲಿ ಘಟನೆ ನಡೆದಿದೆ. ಕೊರ್ಲಹಳ್ಳಿ ಗ್ರಾಮದ ಯುವಕರು ಹಣ ನೀಡದಿರುವ ವಿಚಾರಕ್ಕೆ ಗಲಾಟೆಯಾಗಿದೆ.
ಟೋಲ್ ಗೇಟ್ ಸಿಬ್ಬಂದಿ ಮತ್ತು ಯುವಕರ ನಡುವೆ ಗಲಾಟೆ
ಕೊರ್ಲಹಳ್ಳಿ ಗ್ರಾಮದ ನಿವಾಸಿಗಳಿಗೆ ಉಚಿತವಾಗಿ ಬಿಡುವಂತೆ ಯುವಕರು ವಾಗ್ವಾದಕ್ಕಿಳಿದಿದ್ದಾರೆ. ರೀತಿ ನಿಯಮ ಇಲ್ಲ ಎಂದ ಟೋಲ್ ಸಿಬ್ಬಂದಿ ಪ್ರತಿವಾದ ಮಾಡಿದ್ದಾರೆ. ಬಳಿಕ ಮಾತಿಗೆ ಮಾತು ಬೆಳೆದು ಎರಡೂ ಗುಂಪುಗಳ ನಡುವೆ ಗಲಾಟೆ ನಡೆದಿದೆ. ನಂತರ ಅದು ಮಾರಾಮಾರಿಗೆ ಕಾರಣವಾಗಿದೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.