ಕರ್ನಾಟಕ

karnataka

ETV Bharat / state

ಗದಗನ ವೃದ್ಧೆಯ ಸಂಪರ್ಕದಲ್ಲಿದ್ದ 42 ಶಂಕಿತರ ಕೊರೊನಾ ವರದಿ ನೆಗೆಟಿವ್.. - Gadag's old lady

ಕೊರೊನಾ ಸೋಂಕಿತ ವೃದ್ಧೆಯ ಸಂಪರ್ಕದಲ್ಲಿದ್ದ ಎಲ್ಲರ ವರದಿಗಳು ನೆಗೆಟಿವ್​ ಬಂದಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ಕೊರೊನಾ
ಕೊರೊನಾ

By

Published : Apr 8, 2020, 5:23 PM IST

ಗದಗ :ವೃದ್ಧೆಯಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಜಿಲ್ಲೆಯಲ್ಲಿ ತಲ್ಲಣ ಶುರುವಾಗಿತ್ತು. ವೃದ್ಧೆಗೆ ಸೋಂಕು ದೃಢಪಡುತ್ತಿದ್ದಂತೆ ಆಕೆಯ ಸಂಪರ್ಕದಲ್ಲಿದ್ದ. ವೈದ್ಯರನ್ನು ಸೇರಿದಂತೆ ಎಲ್ಲರ ವರದಿಗಳು ನೆಗೆಟಿವ್ ಬಂದಿದೆಎಂದುಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಟ್ಟು 49 ಜನರ ಗಂಟಲು ದ್ರವ್ಯ ಮಾದರಿಗಳಲ್ಲಿ 2 ತಿರಸ್ಕೃತಗೊಂಡಿವೆ. ಉಳಿದ 47 ಪ್ರಕರಣಗಳ ವರದಿ ನಗೆಟಿವ್‌ ಬಂದಿದೆ. ಇದರಲ್ಲಿ ಪಿ-166 ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 35 ಜನ ಹಾಗೂ ಚಿಕಿತ್ಸೆ ನೀಡಿದ 7 ಜನ ವೈದ್ಯ ಸಿಬ್ಬಂದಿ ಸೇರಿ 42 ಮತ್ತು ಇನ್ನುಳಿದ 5 ಪ್ರಕರಣಗಳ ವರದಿಯೂ ನಕಾರಾತ್ಮಕ ಆಗಿರುತ್ತವೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಆದರೆ, ಆ ವೃದ್ಧೆಗೆ ಹೇಗೆ ಪಾಸಿಟಿವ್ ಬಂದಿದೆ ಅನ್ನೊದೇ ಯಕ್ಷ ಪ್ರಶ್ನೆಯಾಗಿದೆ ಎಂದರು.

ABOUT THE AUTHOR

...view details