ಕರ್ನಾಟಕ

karnataka

ETV Bharat / state

ಗೆಳತಿಯ ಬಾಯ್​ಫ್ರೆಂಡ್​ನಿಂದಲೇ ಅತ್ಯಾಚಾರ ಆರೋಪ: ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ - ರಫೀಕ್ ಚಿಂಚಲಿ

ಗೆಳತಿಯ ಬಾಯ್​​ಫ್ರೆಂಡ್​​ನಿಂದಲೇ ಅತ್ಯಾಚಾರ ನಡೆದಿದೆ ಅಂತಾ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಅತ್ಯಾಚಾರವೆಸಗಿದ ಆರೋಪಿ ರಫೀಕ್ ಚಿಂಚಲಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಗೆಳತಿಯ ಬಾಯ್​ಫ್ರೆಂಡ್​ನಿಂದಲೇ ಅತ್ಯಾಚಾರ
ಗೆಳತಿಯ ಬಾಯ್​ಫ್ರೆಂಡ್​ನಿಂದಲೇ ಅತ್ಯಾಚಾರ

By

Published : Oct 22, 2021, 4:43 PM IST

ಗದಗ: ರಾತ್ರಿ ವೇಳೆ ಮನೆಗೆ ನುಗ್ಗಿದ ಯುವಕ, ಯುವತಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಗದಗ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಳಿ ಬಂದಿದೆ. ಗೆಳತಿಯ ಬಾಯ್​​ಫ್ರೆಂಡ್​​ನಿಂದಲೇ ಅತ್ಯಾಚಾರ ನಡೆದಿದೆ ಅಂತಾ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಅತ್ಯಾಚಾರ ಎಸಗಿದ ಆರೋಪಿ ರಫೀಕ್ ಚಿಂಚಲಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಘಟನೆಯ ಹಿನ್ನೆಲೆ: ಸಂತ್ರಸ್ತೆ ಹಾಗೂ ಅವಳ ಸ್ನೇಹಿತೆ ಇಬ್ಬರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರು ಸೇರಿ ಒಂದೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಸಂತ್ರಸ್ತೆಯ ಗೆಳತಿ ಪ್ರಿಯಕರ ರಫೀಕ್​ ಆಗಾಗ ಮನೆಗೆ ಬರುತ್ತಿದ್ದ. ಘಟನೆ ನಡೆಯುವ ಮುನ್ನ ಸಹ ಆರೋಪಿಯು ಸ್ನೇಹಿತೆಯನ್ನು ಕೇಳಿಕೊಂಡು ಮನೆಗೆ ಬಂದಿದ್ದಾನೆ.

ಆಗ ಮನೆಯಲ್ಲಿ ಸಂತ್ರಸ್ತೆ ಮಾತ್ರ ಇದ್ದು, ನಿಮ್ಮ ಗೆಳತಿ ಇನ್ನೂ ಮನೆಗೆ ಬಂದಿಲ್ಲ ಅಂತಾ ಹೇಳಿದ್ದಾಳೆ. ಆದರೆ, ಏಕಾಏಕಿ ಮನೆಯೊಳಗೆ ನುಗ್ಗಿದ ಆರೋಪಿಯು ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಈ ಬಗ್ಗೆ ಯಾರಿಗಾದರೂ ತಿಳಿಸಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ನಂತೆ ಯುವಕ.

ಇದನ್ನೂ ಓದಿ: ಮಗನಿಂದಲೇ ತಂದೆ- ಆತನ ಪ್ರೇಯಸಿ ಕೊಲೆ ಪ್ರಕರಣ.. ಕಾರಣ ಇಷ್ಟೇ ರೀ..

ಸದ್ಯ ಸಂತ್ರಸ್ತೆಗೆ ಗದಗ ಜಿಮ್ಸ್​​ನ ಸಖಿ ಒನ್ ಸ್ಟಾಪ್ ಸೆಂಟರ್​​ನಲ್ಲಿ ಚಿಕಿತ್ಸೆ ನೀಡುತ್ತಿದ್ದಾಳೆ. ಆರೋಪಿ ರಫೀಕ್​​ನನ್ನು ವಶಕ್ಕೆ ಪಡೆದಿರುವ ಗದಗ ಮಹಿಳಾ ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಗದಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details