ಕರ್ನಾಟಕ

karnataka

By

Published : Apr 13, 2020, 2:46 PM IST

ETV Bharat / state

ಶೌಚಾಲಯವೇ ಮನೆ, ಅಲ್ಲೇ ಅಡುಗೆ, ಊಟ:  ನಾಗರಿಕ ಸಮಾಜದಲ್ಲಿ ಇದೆಂಥ ವ್ಯವಸ್ಥೆ!!?

ನರಗುಂದ ಪಟ್ಟಣದ ಸಾರ್ವಜನಿಕ ಶೌಚಾಲಯ ಸ್ವಚ್ಛತಾ ಸಿಬ್ಬಂದಿ ತನ್ನ ಕುಟುಂಬ ಸಮೇಲೆ ನಾಲ್ಕು ತಿಂಗಳಿಂದ ಅಲ್ಲಿಯೇ ವಾಸಗಿದ್ದು, ದೂರ ದೂರಿನಿಂದ ದುಡಿಯಲು ಕರೆತರುವ ಎನ್​ಜಿಒ ಸಂಸ್ಥೆಗಳು ಕಾರ್ಮಿಕರಿಗೆ ಸರಿಯಾದ ವಸತಿ ಸೌಲಭ್ಯ ಕಲ್ಪಿಸುತ್ತಿಲ್ಲವೇ ಎಂಬ ಅನುಮಾನ ಮೂಡುವಂತೆ ಮಾಡಿದೆ.

public-toilet-cleaning-workers-staying-in-toilet
ಸಾರ್ವಜನಿಕ ಶೌಚಾಲಯ

ಗದಗ : ಸಾರ್ವಜನಿಕ ಶೌಚಾಲಯದಲ್ಲಿ ಸ್ವಚ್ಛತಾ ಕೆಲಸ ಮಾಡುವ ಸಿಬ್ಬಂದಿ ಅಲ್ಲಿಯೇ ಕುಟುಂಬ ಸಮೇತ ವಾಸವಾಗಿರುವ ಸಂಗತಿ ಬಡವರಿಗೆ ಗೌರವಯುತ ಬದುಕು ಸಾಗಿಸುವ ಹಕ್ಕಿಲ್ಲವೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

ನರಗುಂದ ಪಟ್ಟಣ ಸಾರ್ವಜನಿಕರ ಶೌಚಾಲಯದಲ್ಲಿ ಸ್ವಚ್ಛತಾ ಕೆಲಸ ಮಾಡುವ ಬಿಹಾರ್​ ಮೂಲದ ಪಪ್ಪು ಎಂಬಾತ ತನ್ನ ಪತ್ನಿ ಸೇರಿ ಎರಡು ಮಕ್ಕಳ ಜೊತೆ ಕಳೆದ ನಾಲ್ಕು ತಿಂಗಳಿಂದ ಅಲ್ಲಿಯೇ ವಾಸವಾಗಿದ್ದಾನೆ. ಖಾಸಗಿ ಎನ್​ಜಿಒಗಳು ಶೌಚಾಲಯ ನಿರ್ವಹಣೆಗಾಗಿ ಅಂತಾರಾಜ್ಯದ ಇಂಹತ ಬಡ ಜನರನ್ನು ನೇಮಿಸಿಕೊಂಡು ಶೋಷಣೆ ಮಾಡುತ್ತಿದೆ ಎಂಬು ಮಾತುಗಳು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿವೆ.

ಶೌಚಾಲಯವೇ ಮನೆ, ಅಲ್ಲೇ ಅಡುಗೆ, ಊಟ, ನಾಗರಿಕ ಸಮಾಜದಲ್ಲಿ ಇದೆಂತಾ ವ್ಯವಸ್ಥೆ

ದುಡಿಯಲು ಬಂದ ಬಡ ಜನರಿಗೆ ಬಾಡಿಗೆ ಮನೆ ಪಡೆದು ಕಾರ್ಯನಿರ್ವಹಿಸುವ ಸಾಮರ್ಥ್ಯವಿಲ್ಲದ ರೀತಿಯಲ್ಲಿ ದಿನಗೂಲಿಯನ್ನು ಸಂಸ್ಥೆಗಳು ನೀಡುತ್ತಿವೆಯಾ ಎಂಬ ಅನುಮಾನ ಮೂಡುತ್ತಿದೆ. ಇದು ಗದಗ ಜಿಲ್ಲೆಯ ಕತೆ ಅಷ್ಟೇ ಅಲ್ಲದೆ ರಾಜ್ಯದ ಹಲವಾರು ಸಾರ್ವಜನಿಕ ಶೌಚಾಲಯಗಳ ಸ್ವಚ್ಚತಾ ಸಿಬ್ಬಂದಿಯ ಪರಿಸ್ಥಿತಿ ಇದಾಗಿದೆ. ಇನ್ನಾದರೂ ಅವರಿಗೂ ಎಲ್ಲರಂತೆ ಬಾಳು ಸಾಗಿಸುವ ನಿಟ್ಟಿನಲ್ಲಿ ಸಂಸ್ಥೆಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತಾ ಎಂದು ಕಾದು ನೋಡಬೇಕಿದೆ.

ABOUT THE AUTHOR

...view details