ಗದಗ :ಪೋಷಕರಿಗೆ, ಅಕ್ಕ-ತಂಗಿಗೆ ಕರೆ ಮಾಡುವುದಾಗಿ ಹೇಳಿ ಮೊಬೈಲ್ ಪಡೆದು ಫೋನ್ ಸಮೇತ ಪರಾರಿಯಾಗುತ್ತಿದ್ದ ಖದೀಮನನ್ನು ಹಿಡಿದು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಗರದ ಕಲಾಮಂದಿರ ಬಳಿ ನಡೆದಿದೆ.
ಯಮನೂರ ಗುಳ್ಳೆದಗುಡ್ಡ ಮೊಬೈಲ್ ಖದೀಮ. ಕಳೆದೆರಡು ದಿನಗಳ ಹಿಂದೆ ಈತ ನಗರದ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣ ಬಳಿಯ ಹೋಟೆಲ್ವೊಂದರ ಬಳಿ ಮಹಿಳೆಯೋರ್ವರಿಂದ ತಾಯಿಗೆ ಕರೆ ಮಾಡುವುದಾಗಿ ಹೇಳಿ ಮೊಬೈಲ್ ಪಡೆದು ಹಾಗೇ ಮಾತನಾಡುತ್ತ ಫೋನ್ ಸಮೇತ ಎಸ್ಕೇಪ್ ಆಗಿದ್ದ.