ಕರ್ನಾಟಕ

karnataka

ETV Bharat / state

ನಾವೂ ಮನುಷ್ಯರು, ಸಮಸ್ಯೆ ಬಗೆಹರಿಸಿ: ಗದಗದಲ್ಲಿ ನಗರಸಭೆ ಕಮೀಷನರ್​ಗೆ ಸ್ಥಳೀಯರಿಂದ ತರಾಟೆ ​

ಗದಗ ನಗರದ ವೀರ ನಾರಾಯಣ ಬಡಾವಣೆ, ಕೆ.ಹೆಚ್.ಪಾಟೀಲ್ ಬಡಾವಣೆಯ ನಿವಾಸಿಗಳು ಪ್ರತಿಭಟನಾ ರ್ಯಾಲಿ ನಡೆಸಿ ಎತ್ತಿನ ಬಂಡಿ ಮತ್ತು ವಾಹನಗಳ ಸಮೇತ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

Protest in Gadag
ಗದಗದಲ್ಲಿ ಪ್ರತಿಭಟನೆ

By

Published : Feb 5, 2021, 4:45 PM IST

ಗದಗ: ಕಾಲೋನಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಹಿನ್ನೆಲೆ ಬಳಲಿದ್ದ ಎರಡು ಬಡಾವಣೆ ನಿವಾಸಿಗಳು ನಗರಸಭೆಗೆ ಎತ್ತಿನ ಬಂಡಿ ಸಮೇತ ಮುತ್ತಿಗೆ ಹಾಕಿ ನಗರಸಭೆ ಕಮೀಷನರ್​ಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಗದಗದಲ್ಲಿ ಪ್ರತಿಭಟನೆ

ವೀರ ನಾರಾಯಣ ಬಡಾವಣೆ, ಕೆ.ಹೆಚ್.ಪಾಟೀಲ್ ಬಡಾವಣೆಯ ನಿವಾಸಿಗಳು, ತೆರಿಗೆ ಕಟ್ಟಿದರೂ ನಮ್ಮ ಬಡಾವಣೆ ನಿರ್ಲಕ್ಷ್ಯ ಮಾಡಿದ್ದೀರಿ. ಮೂಲಭೂತ ಸೌಲಭ್ಯಗಳನ್ನು ನೀಡುತ್ತಿಲ್ಲ. ದಶಕಗಳಿಂದ ಚರಂಡಿ ಕೊಳಚೆ ಮಿಶ್ರಿತ ನೀರು ಕುಡಿಸುತ್ತಿದ್ದೀರಿ. ನಮ್ಮ ಸಮಸ್ಯೆಗೆ ಸ್ಪಂದಿಸಿ ಎಂದು ಮನವಿ ಮಾಡಿದ್ದಾರೆ.

ಆದರೆ ಕಮೀಷನರ್ ಜಾಧವ್ ಸೂಕ್ತ ಉತ್ತರ ನೀಡದೆ ಟೈಮ್ ಲಿಮಿಟ್ ನಿಮಗೆ ಬಿಟ್ಟಿದ್ದು, ತಿಂಗಳ ಒಳಗೆ ಕೆಲಸ ಮಾಡಿ ಕೊಡಿ ಎಂದರೆ ಆಗಲ್ಲ ಅಂತಿದ್ದಾರೆ. ಇದರಿಂದ ಬಡಾವಣೆ ನಿವಾಸಿಗಳು ಮತ್ತಷ್ಟು ಆಕ್ರೋಶಗೊಂಡರು.

ABOUT THE AUTHOR

...view details