ಕರ್ನಾಟಕ

karnataka

ETV Bharat / state

ಫಲಾನುಭವಿಗಳಿಗೆ ಉಚಿತ ಮನೆ ವಿತರಿಸುವಂತೆ ಆಗ್ರಹಿಸಿ ಪ್ರತಿಭಟನೆ.. - ಗದಗ ಸುದ್ದಿ

ಬಡ ಫಲಾನುಭವಿಗಳಿಗೆ ಉಚಿತ ಮನೆಗಳನ್ನು ಹಂಚಿಕೆ ಮಾಡದಿದ್ದರೆ ಮುಂದಿನ ದಿನಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಸಿದರು.

Protest demanding free home for beneficiaries
ಫಲಾನುಭವಿಗಳಿಗೆ ಉಚಿತವಾಗಿ ಮನೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

By

Published : Feb 7, 2020, 3:00 PM IST

ಗದಗ:ನಗರದ ಗಂಗಿಮಡಿ ಕಾಲೋನಿಯಲ್ಲಿ ನಿರ್ಮಿಸುವ ಗುಂಪು ಮನೆಗಳನ್ನ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಬೇಕೆಂದು ಆಗ್ರಹಿಸಿ ಶ್ರೀರಾಮಸೇನೆ ಸಂಘಟನೆ ಸಹಯೋಗ ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಲಾಯಿತು.

ಫಲಾನುಭವಿಗಳಿಗೆ ಉಚಿತವಾಗಿ ಮನೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ..

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ನೂರಾರು ಫಲಾನುಭವಿಗಳು ಪ್ರಧಾನಮಂತ್ರಿ ಹಾಗೂ ವಸತಿ ಯೋಜನೆಯಡಿ 3,630 ಮನೆಗಳನ್ನ ಗುಡಿಸಲು ನಿವಾಸಿಗಳು, ನಿರಾಶ್ರಿತರು, ಕಡು ಬಡವರಿಗೆಂದು ನಿರ್ಮಾಣ ಮಾಡಲಾಗಿದೆ. ಈಗ ಆಯಾ ಫಲಾನುಭವಿಗಳು ಸದ್ಯಕ್ಕೆ ₹50 ಸಾವಿರ ಹಣ ತುಂಬುವಂತೆ ನಗರಸಭೆ ನೋಟಿಸ್ ನೀಡಿದ್ದಕ್ಕೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

ಬಡ ಫಲಾನುಭವಿಗಳಿಗೆ ಉಚಿತ ಮನೆಗಳನ್ನು ಹಂಚಿಕೆ ಮಾಡದಿದ್ದರೆ ಮುಂದಿನ ದಿನಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಸಿದರು.

ABOUT THE AUTHOR

...view details