ಕರ್ನಾಟಕ

karnataka

ETV Bharat / state

ಶಾಲಾ ಆವರಣಕ್ಕೆ ಚರಂಡಿ ನೀರು... ವಿದ್ಯಾರ್ಥಿಗಳು, ಪಾಲಕರಿಂದ ಪ್ರತಿಭಟನೆ - undefined

ಶಾಲಾ‌ ಆವರಣಕ್ಕೆ ಚರಂಡಿ‌ ನೀರು ಹರಿದು ಬರೋದನ್ನ ವಿರೋಧಿಸಿ ರೋಣ ತಾಲೂಕಿನ ಇಟಗಿ ಗ್ರಾಮದ ವಿದ್ಯಾರ್ಥಿಗಳು ಮತ್ತು ಪಾಲಕರು ಗ್ರಾಪಂ ಮುಂದೆ ಪ್ರತಿಭಟನೆ ಮಾಡಿದರು.

ಚರಂಡಿ ನೀರು ಶೇಖರಣೆಯಾಗುವುದನ್ನು ವಿರೋಧಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

By

Published : Jun 27, 2019, 6:08 AM IST

ಗದಗ: ಶಾಲಾ ಆವರಣದಲ್ಲಿ ಚರಂಡಿ ನೀರು ಶೇಖರಣೆಯಾದ ಹಿನ್ನೆಲೆ ಶಾಲಾ ವಿದ್ಯಾರ್ಥಿಗಳು ಹಾಗೂ ಪಾಲಕರು ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಇಟಗಿ ಗ್ರಾಮದಲ್ಲಿ ನಡೆದಿದೆ.

ಚರಂಡಿ ನೀರು ಶೇಖರಣೆಯಾಗುವುದನ್ನು ವಿರೋಧಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಶಾಲಾ‌ ಆವರಣಕ್ಕೆ ಚರಂಡಿ‌ ನೀರು ಹರಿದು ಬರೋದನ್ನ ನಿಲ್ಲಿಸಿ ಅಂತ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದರೆ ಈವರೆಗೂ ಗ್ರಾಪಂ ಪಿಡಿಒ ಮತ್ತು ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಿಲ್ಲ. ಸಮಸ್ಯೆ ಪರಿಹರಿಸುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಹಾಗೂ ಸ್ಥಳಕ್ಕೆ ತಹಶೀಲ್ದಾರರು ಬರುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು.

ಇನ್ನು ಈ ಚರಂಡಿ‌ ನೀರು ಶಾಲಾ ಆವರಣದಲ್ಲಿ ನಿಲ್ಲುವುದರಿಂದ ಸೊಳ್ಳೆ ಕಾಟ ಹೆಚ್ಚಾಗಿ ಪಾಠ ಕೇಳಲು ಆಗಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

For All Latest Updates

TAGGED:

ABOUT THE AUTHOR

...view details